ಬೆಂಗಳೂರು : ಅತ್ತಿಗೆಯ ಕಿರುಕುಳಕ್ಕೆ ಬೇಸತ್ತ ಮೈದುನ ಹಬ್ಬ ಕೊಠಡಿಯಲ್ಲಿ ವೆಲ್ ಬಳಸಿ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರಿಶಿಣ ಕುಂಟೆಯಲ್ಲಿ ಈ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನಾಗರಾಜು (35) ಎಂದು ಹೇಳಲಾಗುತ್ತಿದ್ದು ಇದೀಗ ಅಮೃತ ನಾಗರಾಜು ಅತ್ತಿಗೆ ಭಾಗ್ಯಮ್ಮ ವಿರುದ್ಧ ನಾಗರಾಜು ತಂದೆ-ತಾಯಿ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಕಿರುಕುಳದ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಎರಡು ವರ್ಷಗಳ ಹಿಂದೆ ಹರಿಶಿಣ ಕುಂಟೆಯಲ್ಲಿ ಮನೆ ಕಟ್ಟಿಸುವವಾಗ ಮೇಸ್ತ್ರಿ ಆಗಿ ಬಂದಿದ್ದ ದಿಲೀಪ್ ಎನ್ನುವ ವ್ಯಕ್ತಿಯ ಜೊತೆ ಅತ್ತಿಗೆ ಸಲುಗೆ ಇದುದ್ದನ್ನು ಮೈದುನ ಪ್ರಶಿಸಿದ್ದಾನೆ.ಈ ವಿಷಯವಾಗಿ ಮನೆ ಬಿಟ್ಟು ಹೋಗುವಂತೆ ದಂಡ ಪಿಂಡ ಎಂದು ಭಾಗ್ಯಮ್ಮ ಹೀಯಾಳಿಸಿದ್ದಳು.
ಇದರಿಂದ ಮನನೊಂದ ನಾಗರಾಜು, ವೇಲ್ ಬಳಸಿ ರೂಂನ ಪ್ಯಾನ್ಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಕಾರಣರಾದ ಭಾಗ್ಯಮ್ಮ ಹಾಗೂ ದಿಲೀಪ್ ಮೇಲೆ ದೂರು ದಾಖಲು ಮಾಡಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.