ಮಂಡ್ಯ : ತನ್ನ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಪತ್ನಿ ಜಗಳ ತೆಗೆದಿದ್ದಕ್ಕೆ ಪಾಪಿ ಪತಿ ಕುಡಿಯುವ ನೀರಿನಲ್ಲಿ ವಿಷ ಬೆರೆಸಿ ಪತ್ನಿ ಇಬ್ಬರು ಮಕ್ಕಳನ್ನು ಹತ್ಯೆಗೈದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿರುವ ವರದಿ ಘಟನೆಯಾಗಿದೆ.
ಕೀರ್ತನ (23) ಮಕ್ಕಳಾದ ಜಯಸಿಂಹ (4) ರಿಷಿಕ (1) ಸಾವನ್ನಪ್ಪಿದ್ದಾರೆ.ಐದು ವರ್ಷಗಳ ಹಿಂದೆ ನರಸಿಂಹ ಹಾಗೂ ಕೀರ್ತನ ಮದುವೆಯಾಗಿದ್ದರು.ದಂಪತಿಗೆ ಒಂದು ಗುಂಡು ಮಗು ಹಾಗೂ ಒಂದು ಹೆಣ್ಣು ಮಗು ಇತ್ತು. ಕಟಿಂಗ್ ಶಾಪ್ ಇಟ್ಕೊಂಡು ಆರೋಪಿ ನರಸಿಂಹ ಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ನರಸಿಂಹ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಪತ್ನಿ ಕೀರ್ತನ ಜಗಳ ತೆಗೆಯುತ್ತಿದ್ದಳು. ಇದೇ ವಿಷಯವಾಗಿ ಮನೆಯಲ್ಲಿ ಪರಿ ನರಸಿಂಹ ಜೊತೆಗೆ ಕೀರ್ತನ ಆಗಾಗ ಜಗಳವಾಡುತ್ತಿದ್ದಳು ಇದೇ ಕಾರಣಕ್ಕೆ ವಿಷ ಹಾಕಿ ಪತ್ನಿ ಮಕ್ಕಳನ್ನು ನರಸಿಂಹ ಹತ್ಯೆಗೈದಿದ್ದಾನೆ.
ಕುಡಿಯುವ ನೀರಿಗೆ ಕ್ರಿಮಿನಾಶಕ ಹಾಕಿದ್ದ ಆರೋಪಿ ನರಸಿಂಹ ಅದೇ ನೀರನ್ನು ಪತ್ನಿ ಹಾಗೂ ಮಕ್ಕಳಿಗೆ ಕುಡಿಸಿ ಬಳಿಕ ತಾನು ಕುಡಿದಿದ್ದ ಎನ್ನಲಾಗುತ್ತಿದೆ. ಇದೀಗ ಅಸ್ವಸ್ಥಗೊಂಡಿರುವ ನರಸಿಂಹಗೆ ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.