ಸುದ್ದಿ ಕೃಪೆ: ಪ್ರಜಾಕಹಳೆ, ಕನ್ನಡ ದಿನಪತ್ರಿಕೆ, ತುಮಕೂರು ಜಿಲ್ಲೆ, ಸಂಪಾದಕರು: ರಘು ಎ.ಎನ್
ತುಮಕೂರು: ಲೋಕಸಭೆ ಚುನಾವಣೆ ಅಭ್ಯರ್ಥಿಗೆ ಮತದಾನ ಮಾಡಿ ಮಾರನೆಯ ದಿನವೇ ಶತಾಯುಷಿ ಗೌಡತಿ ಈರಮ್ಮ (101) ಅವರು ಮೃತಪಟ್ಟಿದ್ದಾರೆ.
ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ರಂಗನಾಥಪುರ ಗ್ರಾಮದ ಶತಾಯುಷಿ ಗೌಡತಿ ಈರಮ್ಮ ಅವರು ಏ. 14 ರಂದು ಲೋಕಸಭೆಗೆ ಮನೆಯಲ್ಲಿ ಮತದಾನ ಮಾಡಿ ಏ. 15 ರಂದು ಮೃತಪಟ್ಟಿದ್ದಾರೆ. ಇವರು ಡಿ.ವೆಂಕಟೇಗೌಡ ಅವರ ಪತ್ನಿಯಾಗಿದ್ದು, ಇವರ ಪುತ್ರರಾದ ಆರ್.ವಿ.ಪುಟ್ಟಕಾಮಣ್ಣ ಅವರು ಸಾಮಾಜಿಕ ಹೋರಾಟಗಾರರಾಗಿದ್ದಾರೆ.