ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವ್ರು ಅಧಿಕಾರಾವಧಿ 10 ವರ್ಷಗಳನ್ನ ಪೂರೈಸಿದ್ದಾರೆ. ಈ 10 ವರ್ಷಗಳಲ್ಲಿ ಅನೇಕ ಸರ್ಕಾರಿ ರಜಾದಿನಗಳಿವೆ. ಆದ್ರೆ, ಈ ಅವಧಿಯಲ್ಲಿ ಪ್ರಧಾನಿ ಮೋದಿ ಒಂದೇ ಒಂದು ರಜೆ ತೆಗೆದುಕೊಂಡಿಲ್ಲ. ಈ ಮಾಹಿತಿ ಆರ್ ಟಿಐನಿಂದ ಬೆಳಕಿಗೆ ಬಂದಿದೆ. ಆರ್ಟಿಐ ಕಾರ್ಯಕರ್ತ ಮತ್ತು ವಾರಣಾಸಿಯ ದೃಷ್ಟಿ ಐಎಎಸ್ ಕೋಚಿಂಗ್ ಪ್ರಾಧ್ಯಾಪಕ ಶೇಖರ್ ಖನ್ನಾ ಅವರು ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಅಧಿಕಾರಾವಧಿಯಲ್ಲಿ ರಜೆಯ ವಿವರಗಳನ್ನ ಪ್ರಧಾನಿ ಕಚೇರಿಯಿಂದ ಕೋರಿದ್ದರು.
ಏಪ್ರಿಲ್ 15ರಂದು ಶೇಖರ್ ಖನ್ನಾ ಅವರಿಗೆ ಆರ್ಟಿಐ ಉತ್ತರ ಬಂದಾಗ ಅವರು ದಿಗ್ಭ್ರಮೆಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ನಿರಂತರವಾಗಿ ಕರ್ತವ್ಯದಲ್ಲಿದ್ದಾರೆ ಎಂದು ಉತ್ತರಿಸಲಾಯಿತು. ಅವರು ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ಈ ಉತ್ತರವನ್ನ ನೋಡಿ ಶೇಖರ್ ಖನ್ನಾ ಕೂಡ ಆಶ್ಚರ್ಯಚಕಿತರಾದರು. ಅಂದ್ಹಾಗೆ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ಮೋದಿಯವರನ್ನ ಸಂದರ್ಶನ ಮಾಡಿದಾಗ, ಆ ಸಮಯದಲ್ಲಿ ಅವರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದಿನಕ್ಕೆ ಮೂರೂವರೆಯಿಂದ ನಾಲ್ಕು ಗಂಟೆಗಳ ಕಾಲ ಮಾತ್ರ ಮಲಗುತ್ತಾರೆ ಎಂದು ಹೇಳಿದ್ದರು. ಉಳಿದ ದಿನಗಳಲ್ಲಿ, ಅವರು 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.
1 ತಿಂಗಳೊಳಗೆ ಪ್ರತಿಕ್ರಿಯೆ.!
ಮಾರ್ಚ್ 16, 2024ರಂದು ಪ್ರಶ್ನೆಯ ಉದ್ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ರಜೆಯ ಬಗ್ಗೆ ಪಿಎಂಒದಿಂದ ಮಾಹಿತಿ ಕೋರಿದ್ದೇನೆ ಎಂದು ಶೇಖರ್ ಖನ್ನಾ ಹೇಳಿದರು. ಒಂದು ತಿಂಗಳೊಳಗೆ ಪ್ರಧಾನಿ ಕಚೇರಿಯ ಹೆಚ್ಚುವರಿ ಕಾರ್ಯದರ್ಶಿ ಪರ್ವೇಶ್ ಕುಮಾರ್ ಅವರು ಲಿಖಿತ ಮಾಹಿತಿಯನ್ನ ಕಳುಹಿಸಿದ್ದಾರೆ.
ಪ್ರಧಾನಿ 65700 ಗಂಟೆಗಳ ಕಾಲ ಕೆಲಸ ಮಾಡಿದರು.!
2014ರ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯದ ನಂತರ, ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದಿನಿಂದ, ಪಿಎಂ ಮೋದಿ ಈ ಹುದ್ದೆಯಲ್ಲಿ ಉಳಿದಿದ್ದಾರೆ. ಅವರು 10 ವರ್ಷಗಳಲ್ಲಿ 65700 ಗಂಟೆಗಳನ್ನ ಅಂದರೆ 3650 ದಿನಗಳನ್ನ ದೇಶ ಸೇವೆಗೆ ಮೀಸಲಿಟ್ಟರು. ಇದರರ್ಥ ಪ್ರಧಾನಿ ಮೋದಿ ಪ್ರತಿದಿನ 18 ಗಂಟೆಗಳ ಕಾಲ ದೇಶದ ಸೇವೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.
500 ವರ್ಷಗಳ ನಂತ್ರ ಇಂದು ದೇಶದಲ್ಲಿ ಹೊಸ ವಾತಾವರಣವಿದೆ : ಕಾಂಗ್ರೆಸ್ ವಿರುದ್ಧ ‘ಪ್ರಧಾನಿ ಮೋದಿ’ ವಾಗ್ದಾಳಿ
BREAKING: ಬೆಂಗಳೂರಲ್ಲಿ ಡಿ.ಜೆ ಹಳ್ಳಿಯಲ್ಲಿ ಕುದುರೆಗೆ ಮಾರಣಾಂತಿಕ ಕಾಯಿಲೆ ‘ಗ್ಲಾಂಡರ್ಸ್ ರೋಗ’ ದೃಢ
ಯುವ ಭಾರತವು ‘ವಿರಾಟ್ ಕೊಹ್ಲಿ’ ಮನಸ್ಥಿತಿ ಹೊಂದಿದೆ, ಯಾರಿಗೂ ಹೆದರುವುದಿಲ್ಲ : ರಘುರಾಮ್ ರಾಜನ್