ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಪರಭಾರೆ ಮಾಡಿರುವ ವಿಚಾರವಾಗಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ .
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಅಕ್ರಮ ಪರಭಾರೆ ಪ್ರಕರಣದಡಿ 4 ಜನ ಆರೋಪಿಗಳನ್ನು ಪಟ್ಟಣ ಠಾಣೆ ಪೊಲೀಸರು ಇದೂವರೆಗೆ ವಶಕ್ಕೆ ಪಡೆದಿದ್ದಾರೆ, ಮೈಸೂರು ಮೂಲದ ಸೋಮಸುಂದರ್, ರಾಮಸಮುದ್ರ ಬಡಾವಣೆಯ ಜಯರಾಮ್ ಎಂಬುವವರಬ್ನ ನಿನ್ನೆ ಮೈಸೂರಲ್ಲಿ ಬಂಧಿಸಿಧ್ದಾರೆ. ಈ ಪ್ರಕರಣದಲ್ಲಿ ಒಟ್ಟು 14 ಜನ ಆರೋಪಿಗಳಿದ್ದು, 3ನೇ ಆರೋಪಿ ಸಿ.ಎಸ್.ಗೋವಿಂದರಾಜು ಅವರನ್ನು ಪೊಲೀಸರು ಮೊದಲು ಬಂಧಿಸಿದ್ದರು. ಭಾನುವಾರ ಕುದೇರು ಹರೀಶ್‌ನನ್ನು ಬಂಧಿಸಲಾಗಿತ್ತು. ಈತನ ವಿಚಾರಣೆ ವೇಳೆ ಪ್ರಕರಣದ 5ನೇ ಆರೋಪಿ ಎಚ್.ಕೆ.ಶರ್ಮ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಈ ಹೆಸರಿನ ವ್ಯಕ್ತಿಯೇ ಇಲ್ಲ ಎಂಬುದು ತಿಳಿದುಬಂದಿದೆ. ಮೈಸೂರಿನ ಸೋಮಸುಂದರ್ ಎಂಬುವವರೇ ಎಚ್.ಕೆ.ಶರ್ಮ ಎಂಬ ನಕಲಿ ಹೆಸರಿನಲ್ಲಿ ಸಂಘದ ಆಸ್ತಿ ಖರೀದಿ ಮಾಡಿದ್ದಾರೆ. ಈತನನ್ನು ಹರೀಶ್‌ಗೆ ಪರಿಚಯಿಸಿರುವುದು ಜಯರಾಮ್ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಮೈಸೂರಿನ ಸೋಮಸುಂದರ್ ಅವರನ್ನು ಹರೀಶ್ ಅವ- ರಿಗೆ ಪರಿಚಯ ಮಾಡಿಕೊಟ್ಟಿರುವುದೇ ಜಯರಾಮ್ ಎಂಬುದು ತಿಳಿದು ಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಆಸ್ತಿಗಳನ್ನು ಪರಭಾರೆ ಮಾಡುವಲ್ಲಿ ಇವರು ಹಿಂದಿನಿಂದಲೂ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಿದರೆ ಸತ್ಯಾಸತ್ಯತೆಗಳು ಹೊರ ಬರುವ ಸಾದ್ಯತೆಗಳಿದೆ ಎನ್ನಲಾಗುತ್ತಿದೆ.