ನವದೆಹಲಿ: ಡೀಪ್ ಫೇಕ್ ತಂತ್ರಜ್ಞಾನ ಇದೀಗ ಬಾಲಿವುಡ್ ನಟ ಅಮಿರ್ ಖಾನ್ ಗೂ ಬಿಸಿ ತಟ್ಟಿದ್ದು, ನಿರ್ದಿಷ್ಟ ರಾಜಕೀಯ ಪಕ್ಷವೊಂದನ್ನು ಬೆಂಬಲಿಸುವ ರೀತಿಯಲ್ಲಿ ಸಾಮಾಜಿಕ ಜಾಲ ಜಾಲತಾಣದಲ್ಲಿ ಓಡಾಡುತ್ತಿರುವ ತಮ್ಮ ವಿಡಿಯೋ ನಕಲಿ ಎಂದು ಖ್ಯಾತ ನಟ ಅಮೀರ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅಮೀರ್ ಪರ ವಕ್ತಾರರು, ತಮ್ಮ 35 ವರ್ಷಗಳ ಚಿತ್ರರಂಗದ ವೃತ್ತಿ ಜೀವನದಲ್ಲಿ ಅಮೀರ್ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ರೀತಿಯಲ್ಲಿ 6 ಡೀಪ್‌ಫೇಕ್ ತಂತ್ರಜ್ಞಾನ ಬಳಸಿ 27 ಸೆಕೆಂಡ್‌ಗಳ ವಿಡಿಯೋ ತಯಾರಿಸಲಾಗಿದೆ. ಇದು ಸಂಪೂರ್ಣ ನಕಲಿ. ಈ ಕುರಿತು ಈಗಾಗಲೇ ಸೈಬರ್ ಕ್ರೈಮ್ ವಿಭಾಗದಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಪರೋಕ್ಷವಾಗಿ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ 15 ಲಕ್ಷ ರು. ಕಪ್ಪುಹಣ ವಾಪಸ್ ಯೋಜನೆ ಯನ್ನು ಟೀಕಿಸುವ ಮತ್ತು ನೇರವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುವಂತೆ ಅಮೀರ್ ಕೋರಿಕೆ ಸಲ್ಲಿಸಿದ ಅಂಶಗಳಿವೆ.