ಯಾದಗಿರಿ : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಈ ಬಾರಿ ಹೆಚ್ಚು ಸ್ಥಾನ ಗೆಲ್ಲದೆ ಹೋದರೆ ಸಚಿವ ಸ್ಥಾನದ ಕುರ್ಚಿಯನ್ನು ಬಿಟ್ಟು ಕೊಡಬೇಕಾಗುತ್ತದೆ ಎಂದು ಯಾದಗಿರಿ ಜಿಲ್ಲೆ ಸುರಪುರದಲ್ಲಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಹೇಳಿಕೆ ನೀಡಿದ್ದಾರೆ
ಕಾಂಗ್ರೆಸ್ ಅಭ್ಯರ್ಥಿಯಾಗಿರುವಂತಹ ರಾಜ ವೇಣುಗೋಪಾಲ ನಾಯಕ ಅವರ ಪರವಾಗಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದೆ ಹೋದರೆ ಆ ಕುರ್ಚಿ ಅವರಿಗೆ ಬಿಟ್ಟು ಕೊಡಬೇಕಾಗುತ್ತದೆ. ನಾವೇ ಲೀಡರ್ ಕೊಡಿಸಲಿಲ್ಲ ಅಂದರೆ ಹೈಕಮಾಂಡಿಗೆ ಹೋಗಿ ಮುಖ ತೋರಿಸಿವುದು ಹೇಗೆ? ಇದು ಹೇಳಬೇಕಂದ್ರೆ ನಮಗೆ ಮಂತ್ರಿ ಕೊಡಬಾರದಿತ್ತು 20,000 ಲೀಡ್ ಕೊಟ್ರಿ ನಿಮ್ಮ ಎಲೆಕ್ಷನ್ ಮಾಡ್ಕೋತೀರಿ ಮಂದಿ ಎಲೆಕ್ಷನ್ ಮಾಡಂಗಿಲ್ಲ ಅನ್ನೋದು ಭಾವನೆ ಬರುತ್ತಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದೆ ಹೋದರೆ ಕುರ್ಚಿ ಅವರಿಗೆ ಬಿಟ್ಟು ಕೊಡಬೇಕಾಗುತ್ತದೆ ಮತ್ತೆ ಈ ಬಾರಿ ಲೀಡ್ ಬರ್ಲಿಲ್ಲ ಅಂದರೆ ಬಹಳ ಕಷ್ಟ ಪಡಬೇಕಾಗುತ್ತೆ. ನಿಮ್ಮ ಎಲ್ಲರಲ್ಲೂ ನಮ್ಮ ಮುಖಂಡರಲ್ಲಿ ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ. ಇವತ್ತು ಕೇವಲ ರಾಯಚೂರು ಲೋಕಸಭಾ ಎಂಪಿ ಮಾತ್ರ ಅಲ್ಲ ನಿಮ್ಮ ಶಕ್ತಿ ಸೂರಪೂರದಲ್ಲೂ ತೋರಿಸೋ ಕೆಲಸ ಮಾಡಿ. ಇವತ್ತು ರಾಜಾ ವೇಣುಗೋಪಾಲ ನಾಯಕರನ್ನ ಗೆಲ್ಲಿಸುವ ಕೆಲಸ ನಾವೆಲ್ಲರೂ ಮಾಡಬೇಕು ಎಂದು ಮನವಿ ಮಾಡಿದರು.