ಬೆಂಗಳೂರು: ಚುನಾವಣಾ ವೀಕ್ಷಕರ ಮೇಲೆಯೇ ಹಲ್ಲೆ ಮಾಡಿ, ದರ್ಪ ತೋರಿ, ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದಂತ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪಕ್ಷದಿಂದ ದೂರು ನೀಡಲಾಗಿದೆ.
ಇಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿದಂತ ಕಾಂಗ್ರೆಸ್ ನಾಯಕರ ನಿಯೋಗವು, ಸಂಸದ ತೇಜಸ್ವಿ ಸೂರ್ಯ ಅವರು ಚುನಾವಣಾ ವೀಕ್ಷಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಮೂಲಕ ದರ್ಪ ತೋರಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಚುನಾವಣಾಧಿಕಾರಿಗಳಿಗೆ ದೂರು ನೀಡಿದ ಬಳಿಕ ಮಾತನಾಡಿದಂತ ಕಾಂಗ್ರೆಸ್ ಎಂಎಲ್ಸಿ ವೆಂಕಟೇಶ್ ಅವರು, ಸಂಸದ ತೇಜಸ್ವಿ ಸೂರ್ಯ ಅವರು ಚುನಾವಣಾ ವೀಕ್ಷಕರನ್ನೇ ತಳ್ಳಿದ್ದಾರೆ. ಅವರ ಮೇಲೆ ದರ್ಪ ತೋರಿದ್ದಾರೆ. ಹಣ ಬಲ, ಅಧಿಕಾರದ ಬಲದಿಂದ ಚುನಾವಣೆ ಗೆಲ್ಲೋದಕ್ಕೆ ಹೊರಟಿದ್ದಾರೆ. ಹೀಗಾಗಿ ಅವರ ವಿರುದ್ಧ ದೂರು ನೀಡಲಾಗಿದೆ ಎಂದರು.
ಸಿಡ್ನಿ ಚರ್ಚ್ ನಲ್ಲಿ ಚೂರಿ ಇರಿತ: ಹಲವರಿಗೆ ಗಾಯ | Sydney stabbing incident
BREAKING : ನ್ಯಾಯಾಂಗ ದುರ್ಬಲಗೊಳಿಸುವ ಪ್ರಯತ್ನ ಖಂಡಿಸಿ 21 ನಿವೃತ್ತ ನ್ಯಾಯಾಧೀಶರಿಂದ ‘CJI’ಗೆ ಪತ್ರ