ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಟೈರ್ ಬ್ಲಾಸ್ಟ್ ಆಗಿ ಟಿಪ್ಪರ್ ಪಲ್ಟಿಯಾದ ಪರಿಣಾಮ ರಸ್ತೆ ಬದಿ ನಿಂತಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೊಲದ ಕೆಲಸ ಮುಗಿಸಿ ರಸ್ತೆ ಪಕ್ಕ ನಿಂತಿದ್ದ ವೇಳೆ ಟೈರ್ ಬ್ಲಾಸ್ಟ್ ಆಗಿ ಟಿಪ್ಪರ್ ವಾಹನ ಪಲ್ಟಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ಯಾಳ ಕ್ರಾಸ್ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಯಂಕಪ್ಪ (70), ಯಲ್ಲವ್ವ (60), ಪುಂಡಲೀಕ (35), ನಾಗವ್ವ (45), ಅಶೋಕ (50) ಮೃತರು.