ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರ ಪರವಾಗಿ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿತಪ್ಪುತ್ತಿದ್ದಾರೆ ಎಂಬ ಹೇಳಿಕೆಗೆ ಇದೀಗ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಇದೀಗ ಕಾಂಗ್ರೆಸ್ ನಾಯಕರು ಕೂಡ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ತಾಯಂದಿರಿಗೆ HDK ಕ್ಷಮೆ ಕೇಳಲಿ : ಪರಮೇಶ್ವರ್
ಗ್ಯಾರೆಂಟಿಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆಂದು ಹೇಳಿಕೆ ವಿಚಾರವಾಗಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಗೃಹ ಸಚಿವ ಜಿ ಪರಮೇಶ್ವರ್ ವಾಗ್ದಾಳಿ ನಡೆಸಿದ್ದು, ನಮ್ಮ ಯೋಜನೆಗಳು ಸರಿ ಇಲ್ಲ ಅಂತ ಬೇಕಿದ್ದರೆ ಹೇಳಲಿ. ಆದರೆ ರಾಜ್ಯದ ತಾಯಂದಿರಿಗೆ ದಾರಿ ತಪ್ಪಿದ್ದಾರೆಂದು ಎಚ್ಡಿಕೆ ಹೇಳಿಕೆ ಖಂಡನೀಯ.ಯಾವ ಅರ್ಥದಲ್ಲಿ ಹೇಳಿದ್ದರು ಹಳ್ಳಿ ಭಾಷೆಯಲ್ಲಿ ಮಾತ್ರ ಕೆಟ್ಟ ಅರ್ಥ ಬರುತ್ತದೆ.
ಇಲ್ಲದಿದ್ದರೆ ರಾಜ್ಯದ ಮಹಿಳೆಯರ ಕ್ಷಮೆ HD ಕುಮಾರಸ್ವಾಮಿ ಕ್ಷಮೆ ಕೇಳಲಿ ಯಾಕೆಂದರೆ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಬಹಳ ತಪ್ಪು ಅರ್ಥ ಕೊಡುತ್ತದೆ.ನಮ್ಮ ಕಾರ್ಯಕ್ರಮ ವಿರೋಧ ಮಾಡುವಲ್ಲಿ ಯಾವುದೇ ತಕರಾರು ಇಲ್ಲ. ಸರ್ಕಾರದ ಯೋಜನೆ ಸರಿಯಿಲ್ಲ ಅಂತ ಬೇಕಾದರೆ ಹೇಳಲಿ. ಆದರೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಜಿ ಪರಮೇಶ್ವರ್ ಎಚ್ ಡಿ ಕೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ತವರು ಮನೆಗೆ ಹೋದ ಮಹಿಳೆ ದಾರಿ ತಪ್ಪಿದ್ದಳ? ಕೃಷ್ಣ ಭೈರೇಗೌಡ
ನಾವು ಕೊಡುತ್ತಿರುವ ಗ್ಯಾರಂಟಿ ಬಡವರು ಮಧ್ಯಮದವರಿಗೆ ಹೋಗುತ್ತಿದೆ. ಯಾರದ್ದೋ ಮನೆಯಲ್ಲಿ ಮುಸುರೆ ತಿಕ್ಕುವ ಮಹಿಳೆ ಕುಟುಂಬಕ್ಕೆ ಗ್ಯಾರಂಟಿ ಯೋಜನೆ ಸಹಾಯವಾಗುತ್ತಿದೆ. ಕುಮಾರಸ್ವಾಮಿ ವ್ಯಾಖ್ಯಾನ ದುಡಿಯುವ ಮಹಿಳೆಗೆ ಮಾಡಿದ ಅವಮಾನ.ದಾರಿ ತಪ್ಪಿದ್ದು ಯಾರು ಕುಮಾರಣ್ಣನವರೇ? ಧರ್ಮಸ್ಥಳ ಸುಬ್ರಮಣ್ಯಕ್ಕೆ ಹೋದ ಮಹಿಳೆ ದಾರಿ ತಪ್ಪಿದ್ದಾಳ? ತಮ್ಮ ತವರು ಮನೆಗೆ ಹೋಗಿದ್ದಾಳಲ್ಲ ಆಕೆ ದಾರಿ ತಪ್ಪಿದ್ದಾಳ? ಎಂದು ಬೆಂಗಳೂರಿನಲ್ಲಿ ಕಂದಾಯ ಇಲಾಖೆಯ ಸಚಿವ ಕೃಷ್ಣ ಭೈರೇಗೌಡ ವಾಗ್ದಾಳಿ ನಡೆಸಿದರು.