ಬೆಂಗಳೂರು : ನಿನ್ನೆ ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರ ಪರವಾಗಿ ಪ್ರಚಾರದ ವೇಳೆ ಎಸ್ ಟಿ ಕುಮಾರಸ್ವಾಮಿ ಅವರು ಗ್ಯಾರಂಟಿಯಿಂದ ಹಳ್ಳಿಯ ತಾಯಂದಿರು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆ ನೀಡಿದರು ಇದೀಗ ಆ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು ಮಹಿಳೆಯರ ಕುರಿತಾಗಿ ನಾನು ಎಂದಿಗೂ ಕೇವಲವಾಗಿ ಮಾತನಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಗ್ಯಾರಂಟಿ ಹೆಸರಲ್ಲಿ ನಿಮ್ಮನ್ನ ದಾರಿ ತಪ್ಪಿಸುತ್ತಿದ್ದಾರೆ. ಮುಗ್ಧ ಜನರನ್ನು ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದೇನೆ. ಕಷ್ಟ ಅಂತ ಬಂದಾಗ ನಾನು ಆಶ್ರಯ ನೀಡಿದ್ದೇನೆ. ನಾನು ಸಿಎಮ್ ಆಗಿದ್ದಾಗ ಮಹಿಳೆಯರಿಗಾಗಿ ಸಾಕಷ್ಟು ಯೋಜನೆ ತಂದಿದ್ದೇನೆ. ಮಹಿಳೆಯರ ಕೂಗಿಗೆ ಸ್ಪಂದಿಸಿ ರಾಜ್ಯದಲ್ಲಿ ಸಾರಾಯಿ ನಿಷೇಧಿಸಿದ್ದೇನೆ ಮಹಿಳೆಯರ ಬಗ್ಗೆ ನಾನು ಕೇವಲವಾಗಿ ಮಾತನಾಡುವುದಿಲ್ಲ ಎಂದರು.
ನಾನು ಮಹಿಳೆಯರಿಗೆ ಅವಮಾನ ಮಾಡಿಲ್ಲ. ಮಹಿಳೆಯರಿಗೆ ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದೇನೆ.ನಾನು ಮಹಿಳೆಯರಿಗೆ ಏನು ಅವಮಾನ ಮಾಡಿದೆ ಗ್ಯಾರೆಂಟಿಯಿಂದ ಮಹಿಳೆಯರ ಮುಗ್ಧತೆ ದುರುಪಯೋಗವಾಗುತ್ತಿದೆ. ಕಾಂಗ್ರೆಸ್ ಅವರಿಂದ ನಾನು ಕಲಿಯಬೇಕಿಲ್ಲ ಅವರಿಗೆ ಉತ್ತರಿಸಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಯಾವುದೋ ಒಂದು ರೀತಿಯಲ್ಲಿ ಕಾಂಗ್ರೆಸ್ ನಾಯಕರು ತಪ್ಪು ಒರಿಸಬೇಕೆಂದು ಹೇಳಿ ಯಾವ ರೀತಿಯಿಂದ ಹೇಳಿದ್ದೇನೆ ಅರ್ಥಮಾಡಿಕೊಳ್ಳದೆ ಆರೋಪ ಮಾಡುತ್ತಿದ್ದಾರೆ. ಈ ರೀತಿ ರಾಜಕೀಯ ಮಾಡುವುದರಿಂದ ಯಾವುದೇ ಅವರಿಗೆ ಲಾಭವಿಲ್ಲ ಸ್ವಲ್ಪ ಸರಿಯಾಗಿ ನಡೆದುಕೊಳ್ಳಿ ಎಂದು ಸ್ಪಷ್ಟವಾಗಿ ತಿಳಿಸಿದರು.