ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಏಪ್ರಿಲ್ 14 ರಂದ ಇಂದು “ಸಂಕಲ್ಪ ಪತ್ರ” ಎಂದು ಕರೆಯಲ್ಪಡುವ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಗೆ ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದ್ದು, ಬಿಜೆಪಿಯ ಪ್ರಣಾಳಿಕೆ ಖಾಲಿ ಡಬ್ಬಾದಂತಿದೆ, ಒಳಗೆ ಖಾಲಿ ಆದರೆ ಶಬ್ದ ಮಾತ್ರ ಹೆಚ್ಚು! ಪ್ರಣಾಳಿಕೆಯ ಮೂಲಕ ಬಿಜೆಪಿ ತನಗೆ ಭಾರತದ ಬಗ್ಗೆ, ಭಾರತೀಯರ ಸ್ಥಿತಿಗತಿಗಳ ಬಗ್ಗೆ ಅರಿವಿಲ್ಲ ಎಂಬುದನ್ನು ಸಾಬೀತು ಮಾಡಿದೆ ಎಂದು ಹೇಳಿದೆ.
ದೂರದೃಷ್ಟಿ ಇಲ್ಲದ, ಭಾರತದ ಭವಿಷ್ಯದ ಬಗ್ಗೆ ಕಲ್ಪನೆ ಇಲ್ಲದ, ಹೊಸ ಆಲೋಚನೆಗಳಿಲ್ಲದ ಪ್ರಣಾಳಿಕೆಯಲ್ಲಿ ಈಗಾಗಲೇ ಹೇಳಿದ ಸುಳ್ಳನ್ನೇ ಮತ್ತೆ ಮತ್ತೆ ಹೇಳಿದ್ದಾರೆ ಎಂದು ಕಿಡಿಕಾರಿದೆ.