ವಿಜಯವಾಡ : ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲಿನಿಂದ ಹಲ್ಲೆ ನಡೆಸಿದ್ದು, ಹಣೆಗೆ ಗಾಯವಾಗಿದೆ.
ಸದ್ಯ ಸಿಎಂ ಜಗನ್ ಬಸ್ ಯಾತ್ರೆ ನಡೆಸುತ್ತಿದ್ದು, ಬಸ್ ಯಾತ್ರೆಯ ಅಂಗವಾಗಿ ಸಿಂಗ್ ನಗರಕ್ಕೆ ಆಗಮಿಸಿದ ಸಿಎಂ ಜಗನ್ ಜನರಿಗೆ ಶುಭಾಶಯ ಕೋರುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಸಿಎಂ ಜಗನ್ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಈ ಘಟನೆಯಲ್ಲಿ ಜಗನ್ ಎಡಗಣ್ಣಿನ ಹುಬ್ಬಿನ ಮೇಲೆ ಅಂದ್ರೆ ಹಣೆಗೆ ಗಾಯವಾಗಿದೆ. ಇನ್ನವ್ರ ಪಕ್ಕದಲ್ಲಿದ್ದ ವೈಸಿಪಿ ಶಾಸಕ ವೆಲ್ಲಂಪಳ್ಳಿ ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
370ನೇ ವಿಧಿ, ರಾಮ ಮಂದಿರದ ನಂತ್ರ ಈಗ ಏನು.? ನಾಳೆ ‘ಬಿಜೆಪಿ ಪ್ರಣಾಳಿಕೆ’ ಬಿಡುಗಡೆ