ನವದೆಹಲಿ : ಲೋಕಸಭಾ ಚುನಾವಣೆ 2024ಗಾಗಿ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ಅದಕ್ಕೆ ಸಂಕಲ್ಪ ಪತ್ರ ಎಂದು ಹೆಸರಿಟ್ಟಿದೆ. ಅದ್ರಂತೆ, ನಾಳೆ ಅಂದ್ರೆ ಭಾನುವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಪ್ರಧಾನ ಕಚೇರಿ ವಿಸ್ತರಣೆಯಲ್ಲಿ ಬಿಡುಗಡೆ ಮಾಡಲಾಗುವುದು.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಹಿರಿಯ ನಾಯಕರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪ್ರಣಾಳಿಕೆಯನ್ನ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಬಿಜೆಪಿಯ ಪ್ರಕಾರ, “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್” ಎಂಬ ಮಂತ್ರವು ಇಡೀ ರಾಷ್ಟ್ರದ ದೃಷ್ಟಿಕೋನದ ದಾಖಲೆಯಾದ ಸಂಕಲ್ಪ ಪತ್ರದಲ್ಲಿ ಪ್ರತಿಬಿಂಬಿತವಾಗಿದೆ.
ಅಂದ್ಹಾಗೆ, ‘ಅಬ್ ಕಿ ಬಾರ್ 400 ಪಾರ್ ಕರೆ’ ಮೂಲಕ ಬಿಜೆಪಿ ಲೋಕಸಭಾ ಚುನಾವಣೆಗೆ ಸಿದ್ಧತೆಗಳನ್ನ ತೀವ್ರಗೊಳಿಸಿದೆ.
BREAKING : 315 ಕೋಟಿ NISP ಯೋಜನೆಯಲ್ಲಿ ಭ್ರಷ್ಟಾಚಾರ : ‘ಮೇಘಾ ಎಂಜಿನಿಯರಿಂಗ್’ ವಿರುದ್ಧ ‘CBI’ ಪ್ರಕರಣ ದಾಖಲು
‘ಜನರಲ್ ಟಿಕೆಟ್’ಗಾಗಿ ಸರತಿ ಸಾಲಿನಲ್ಲಿ ನಿಂತು ಸಾಕಾಗಿದ್ಯಾ.? ನಿಮಗಿದು ಗುಡ್ ನ್ಯೂಸ್
ರಾಜ್ಯದಲ್ಲಿ ಇನ್ನು ಮುಂದೆ ದಳ ಇರಲ್ಲ, ಕುಮಾರಣ್ಣ ನಿಮ್ಮ ಪಾರ್ಟಿ ಮಾರಿ ಆಗೋಯ್ತು : ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ