ವಿಜಯಪುರ : ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆಗೆ ವರುಣ ಕೃಪೆ ತೋರಿದ್ದಾನೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದೂ, ಇನ್ನೊಂದು ಕಡೆ ವಿಜಯಪುರ ಜಿಲ್ಲೆಯಲ್ಲಿ ಸಿಡಿಲಾರ್ಭಟಕ್ಕೆ ಮೂವರು ವ್ಯಕ್ತಿಗಳು ಬಲಿಯಾಗಿರುವ ಘಟನೆ ಕೂಡ ನಡೆದಿದೆ.
ಹೌದು ಇಂದು ಸುರಿದ ಭಾರಿ ಮಳೆಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಸಿಡಿಲಿಗೆ ಭಾರತಿ ಕೆಂಗನಾಳ(40) ಎಂಬ ಮಹಿಳೆ ಬಲಿಯಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಭಾರತಿ ಕೆಂಗನಾಳ ಮೃತಪಟ್ಟಿದ್ದು, ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ಜರುಗಿದೆ.
ಅಲ್ಲದೆ ನಿನ್ನೆ ಕೂಡ ಇಬ್ಬರು ಸಿಡಿಲಿನ ಹೊಡೆತಕ್ಕೆ ಬಲಿಯಾಗಿದ್ದು, ಇಂಡಿ ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು ಭೀಮಪ್ಪ ಅವರಾಧಿ 15 ವರ್ಷದ ಬಾಲಕ ಬಲಿಯಾಗಿದ್ದ. ಇನ್ನೂ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ 45 ವರ್ಷದ ಸೋಮು ಪಟ್ಟಣಶೆಟ್ಟಿ ಸಾವನ್ನಪ್ಪಿದ್ದರು. ಇಂದು ಸಹ ಮಹಿಳೆ ಸಿಡಿಲಿಗೆ ಬಲಿಯಾಗಿದ್ದು, ಸಿಡಿಲಾರ್ಭಟ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಇತ್ತ ಕೊಪ್ಪಳ ಜಿಲ್ಲೆಯಲ್ಲೂ ಕೂಡ ಭಾರೀ ಮಳೆಯಾಗಿದ್ದು ಜನರು ಮಳೆಯಾಗಿದ್ದರಿಂದ ಕೊಂಚ ನೆಟ್ಟುಸಿರು ಬಿಟ್ಟಿದ್ದಾರೆ ಅಲ್ಲದೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಹಾಗೂ ತೆರದಾಳದಲ್ಲೂ ಕೂಡ ಭಾರಿ ಮಳೆಯಾಗಿದೆ ಇನ್ನು ಮೂರು ಗಂಟೆಗಳ ಕಾಲ 40 ರಿಂದ 50 km ವೇಗದಲ್ಲಿ ಗಾಳಿ ಬೀಸಲಿದ್ದು ಸಿಡಿಲು ಗುಡುಗು ಸಹಿತ ಭಾರಿ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.