ಶಿವಮೊಗ್ಗ: ಶಿವಮೊಗ್ಗದಿಂದ ಲೋಕಸಭೆಗೆ ಬಿಜೆಪಿ ಮಾಜಿ ಡಿಸಿಎ ಮತ್ತು ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಇಂದು ತಮ್ಮ ಕುಟುಂಬದೊಂದಿಗೆ ನಾಮಪತ್ರವನ್ನು ಸಲ್ಲಿಸಿದೆ.
ಅಂದ ಹಾಗೇ ಅವರ ಬಳಿ ಒಟ್ಟು ಆಸ್ತಿ ಮೌಲ್ಯ 98 ಕೋಟಿ 92 ಲಕ್ಷದ 20 ಸಾವಿರ ಇದೆ ಅಂಥ ನಾಮಪತ್ರ ಸಲ್ಲಿಸುವಿಕೆ ಸಮಯದ ಅಫಿಡವಿಟ್ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಇದಲ್ಲದೇ ತಮ್ಮ ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 35 ಕೋಟಿ 50 ಲಕ್ಷದ 20 ಸಾವಿರ ಮೌಲ್ಯದ ಆಸ್ತಿ ಇದೆ ಎಂದು ತಿಳಿಸಿದ್ದಾರೆ.
ಇದಲ್ಲದೇ ಈಶ್ವರಪ್ಪ ಅವರ ಕೈಯಲ್ಲಿ ಇರುವ ನಗದು 25 ಲಕ್ಷ. ಪತ್ನಿ ಜಯಲಕ್ಷ್ಮಿ ಅವರ ಕೈಯಲ್ಲಿ ಇರುವ ನಗದು 2 ಲಕ್ಷ. ಈಶ್ವರಪ್ಪ ಹೆಸರಿನಲ್ಲಿ ಬಂಗಾರ 300 ಗ್ರಾಂ, ಬೆಳ್ಳಿ 2 ಕೆ.ಜಿ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಬಂಗಾರ 500 ಗ್ರಾಂ, ಬೆಳ್ಳಿ 5 ಕೆ.ಜಿ. ಇದೆ ಅಂತ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ಈಶ್ವರಪ್ಪ ಹೆಸರಿನಲ್ಲಿ ನಿಧಿಗೆ ಗ್ರಾಮದ ಬಳಿ 1 ಎಕರೆ 31 ಗುಂಟೆ ಕೃಷಿ ಭೂಮಿ ಇದ್ದು, 4 ಎಕರೆ 24 ಗುಂಟೆ ಕೃಷಿಯೇತರ ಭೂಮಿ ಇದೆ. ಶಿವಮೊಗ್ಗದಲ್ಲಿ ವಾಸದ ಮನೆ. ಬೆಂಗಳೂರಿನ ಜಯನಗರದಲ್ಲಿ ನಿವೇಶನ ಇದೆಯಂತೆ. ಈಶ್ವರಪ್ಪ ಅವರ ಹೆಸರಿನಲ್ಲಿ ಚರಾಸ್ಥಿ 4 ಕೋಟಿ 28 ಲಕ್ಷದ 61 ಸಾವಿರ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಚರಾಸ್ಥಿ 3 ಕೋಟಿ 77 ಲಕ್ಷದ 34 ಸಾವಿರ ಇದೆ. ಈಶ್ವರಪ್ಪ ಹೆಸರಿನಲ್ಲಿ ಸ್ಥಿರಾಸ್ಥಿ 10 ಕೋಟಿ 95 ಲಕ್ಷದ 59 ಸಾವಿರ ಮತ್ತು ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಸ್ಥಿರಾಸ್ಥಿ 7 ಲಕ್ಷದ 31 ಸಾವಿರ ಇದೆ. ಈಶ್ವರಪ್ಪ ಹೆಸರಿನಲ್ಲಿ 5 ಕೋಟಿ 87 ಲಕ್ಷದ 39 ಸಾವಿರ ರೂಪಾಯಿ ಸಾಲ ಇದ್ದರೆ, ಅವರ ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 70 ಲಕ್ಷದ 80 ಸಾವಿರದ 13 ಸಾವಿರ ಸಾಲ ಇದೆಯಂತೆ.