ಬೆಂಗಳೂರು : ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪಶ್ವಮಂಗಳದಲ್ಲಿ ಅಧಿಕಾರಿಗಳ ತಂಡ ಇಬ್ಬರು ಪ್ರಮುಖ ಶಂಕಿತರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ಪಡೆದಿದೆ. ನಂತರ ಮೆಡಿಕಲ್ ಟೆಸ್ಟ್ ಬಳಿಕ ವಿಶೇಷ ಕೋಟೆಗೆ ಆರೋಪಿಗಳನ್ನು ಹಾಜರುಪಡಿಸಿತು. ಈ ವೇಳೆ 3 ದಿನ ಟ್ರಾನ್ಸೆಟ್ ಕಸ್ಟಡಿಗೆ ನೀಡಿ ಕೊಲ್ಕತ್ತಾದ ಎನ್ಐಎ ಕೋರ್ಟ್ ಆದೇಶ ಹೊರಡಿಸಿದೆ
ಹೌದು ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಮುಸವಿರ್ ಹಾಗೂ ಅಬ್ದುಲ್ ಮತೀನ್ ಗೆ ಮೂರು ದಿನ ಟ್ರಾನ್ಸಿಟ್ ಕಸ್ಟಡಿಗೆ ನೀಡಿ ಕೊಲ್ಕತ್ತಾ NIA ಕೋರ್ಟ್ ಆದೇಶ ನೀಡಿದೆ. ಮೂರು ದಿನಗಳಲ್ಲಿ ಸಂಬಂಧಪಟ್ಟ ಕೋರ್ಟಿಗೆ ಹಾಜರುಪಡಿಸಲು ಅವಕಾಶ ನೀಡಿದ್ದು, ಬಂಧಿಸಿದ 24 ಗಂಟೆಗಳಲ್ಲಿ ಹಾಜರುಪಡಿಸಬೇಕು ಎಂದು ಸೂಚಿಸಿದೆ.
ಅಲ್ಲದೆ ಬೆಂಗಳೂರಿನ ಕೋರ್ಟಿಗೆ ಹಾಜರುಪಡಿಸಲು ಕಾಲಾವಕಾಶ ಬೇಕಾದ ಹಿನ್ನೆಲೆಯಲ್ಲಿ ಮೂರು ದಿನ ಟ್ರಾನ್ಸಿಟ್ ಸ್ಟಡಿಗೆ ಕೊಲ್ಕತ್ತಾ ನೀಡಿದೆ ಎಂದು ತಿಳಿದುಬಂದಿದೆ. ಕೊಲ್ಕತ್ತಾ ಕೋರ್ಟಿನಿಂದ ಎನ್ಐಎ ಟ್ರಾನ್ಸಿಟ್ ಕಸ್ಟಡಿಗೆ ಪಡೆದ NIA ಇಂದು ಬೆಳಿಗ್ಗೆ ಕೊಲ್ಕತ್ತಾದ ಹೊರವಲಯದಲ್ಲಿ ಇಬ್ಬರು ಉಗ್ರರನ್ನು ಅಧಿಕಾರಿಗಳು ಬಂಧಿಸಿದ್ದರು ಎಂದು ಹೇಳಲಾಗುತ್ತಿದೆ.