ಬೆಳಗಾವಿ : ಲೋಕಸಭೆ ಚುನಾವಣೆ ಹೊತ್ತಲ್ಲೇ ಎಂಎಲ್ಸಿ ಬಿಜೆಪಿ ಹರಿಪ್ರಸಾದ್ ಅವರು ಸ್ಪೋಟಕ ಹೇಳಿಕೆಯ ನೀಡಿದ್ದು ಲೋಕಸಭೆ ಚುನಾವಣೆಯಲ್ಲಿ ನಾನು ಸ್ಟಾರ್ ಕ್ಯಾಂಪೇನರ್ ಇದಿನಿ ನನ್ನ ಯಾರು ಉಪಯೋಗಿಸಿಕೊಳ್ಳಲು ಆಗುವುದಿಲ್ಲ ಆದರೆ ಕಾಂಗ್ರೆಸ್ ಪಕ್ಷಕ್ಕೆ ನನ್ನ ಉಪಯೋಗವಿದೆ ಹಾಗಾಗಿ ಬೆಳಗಾವಿಯಲ್ಲಿ ಬಂದು ಪೆನ್ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ ಸಮುದಾಯದ ಸಮಾವೇಶ ಒಂದರಲ್ಲಿ ಮಾತನಾಡಿದ ಅವರು ನಾನು ಸ್ಟಾರ್ ಕ್ಯಾಂಪೇನರ್ ನನ್ನನ್ನು ಉಪಯೋಗಿಸಿಕೊಳ್ಳಲು ಆಗುವುದಿಲ್ಲ. ಏನೆ ಭಿನ್ನಾಭಿಪ್ರಾಯವಿದರೂ ಪೆನ್ ಡ್ರೈವ್ನಲ್ಲಿಟ್ಟು ಆಮೇಲೆ ಹೇಳುತ್ತೇನೆ. ಪಕ್ಷ ನನ್ನನ್ನು ಬಳೆಸಿಕೊಳ್ಳಲಿ ಆದರೆ ಬೇರೆಯವರು ಬಳಸಿಕೊಳ್ಳಲು ಬಿಡಲ್ಲ ಎಂದು ತಿಳಿಸಿದರು.ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿಲ್ಲ. ದಿಲ್ಲಿಯಿಂದ ರಾಜಕಾರಣ ಮಾಡಿದ್ದೇನೆ. ಕಾಂಗ್ರೆಸ್ ಗೆ ಸಾಕಷ್ಟು ದುಡಿದಿದ್ದೇನೆ ನಾನು ಬೆಳೆಸಿದವರು ಬರಿ ಸಚಿವರಲ್ಲ ಇನ್ನು ಏನೇನೋ ಆಗಿದ್ದಾರೆ ಎಲ್ಲವನ್ನು ಇಟ್ಟಿದ್ದೇನೆ ಎಂದು ಬಿಕೆ ಹರಿಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದಾರೆ.
ಚುನಾವಣೆ ಆದಮೇಲೆ ಬೆಳಗಾವಿಯಲ್ಲಿ ಪೆನ್ ಡ್ರೈವ್ ಬಿಡುತ್ತೇನೆ.ರಾಜಕಾರಣದಲ್ಲಿ ಹಲವು ಮುಖವಾಡಗಳನ್ನು ನೋಡಬೇಕಾಗುತ್ತದೆ. ನನ್ನ ಮಿಸ್ಟೇಕ್ ಕಾಂಗ್ರೆಸ್ ತ್ರಿವರ್ಣ ಧ್ವಜ AICC ಅಧ್ಯಕ್ಷರ ಕುರ್ಚಿಗೆ ಎಂದು ಅವರು ತಿಳಿಸಿದರು.ಹೀಗಾಗಿ ಪರೋಕ್ಷವಾಗಿ ಸಿದ್ದರಾಮಯ್ಯ ಬಣದ ವಿರುದ್ಧ ಬಿಕೆ ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ. ಹಿಂದೆ ಸಿಎಂ ಮಾಡೋದು ಹೇಗೆ ಇಳಿಸುವುದು ಹೇಗೆ ಎಂದು ಹೇಳಿಕೆ ನೀಡಿದ್ದರು. ಈಗ ಚುನಾವಣೆ ಬಳಿಕ ಪೆನ್ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.