ಹಾಸನ : ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಕ್ಕೆ ಬಿಜೆಪಿ ಮುಖಂಡನ ಹಲ್ಲೆ ನಡೆದಿರುವ ಘಟನೆ ನಡೆದಿದೆ. ಮಾಜಿ ಶಾಸಕ ಪ್ರೀತಂ ಗೌಡ ಬೆಂಬಲಿಗರ ವಿರುದ್ಧ ಇದೀಗ ಹಲ್ಲೆ ನಡೆಸಿರುವ ಆರೋಪ ಕೇಳಿ ಬರುತ್ತಿದೆ.
ಹಾಸನದ ಎಮ್‌ಜಿ ರಸ್ತೆಯ ಅಂಗಡಿಯಲ್ಲಿದ್ದ ವಸ್ತುಗಳು ದ್ವಂಸ ಮಾಡಲಾಗಿದ್ದು, 30ಕ್ಕೂ ಹೆಚ್ಚು ಯುವಕರ ಗುಂಪಿನಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ.
ವಿಜಯ್ ಕುಮಾರ್, ಪ್ರಮೋದ್ ಹಾಗೂ ಸಂದೇಶ ಹಳ್ಳಿಗೆ ಗಂಭೀರವಾದ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ದಾಳಿಗೆ ಒಳಗದ ಮೂವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಅಂಗಡಿ ಬಳಿ ಬಂದ 30ಕ್ಕೂ ಹೆಚ್ಚು ಜನರು ಬೇರೆಯವರ ಪರ ಪ್ರಚಾರ ಮಾಡ್ತೀಯಾ ಹೀಗೆ ಹೇಳಿ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ .ದಾಳಿ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ವಕ್ತಾರ ವಿಜಯ್ ಕುಮಾರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಡಿಸಿ ಹಾಗೂ ಎಸ್ ಪಿ ಭೇಟಿ ಮಾಡಿದ ಮೈತ್ರಿ ನಿಯೋಗ. ಅಲ್ಲದೆ ಶಾಸಕರಾದ ಸ್ವರೂಪ್ ಕೂಡ ಭೇಟಿ ನೀಡಿದ್ದು ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ. ಎಂದು ತಿಳಿದು ಬಂದಿದೆ ಇದೆ ವೇಳೆ ಹಾಸನದ ಎಸ್ ಪಿ ಆರೋಪಿಗಳನ್ನು ಶೀಘ್ರವಾಗಿ ಬಯಸುತ್ತೇವೆ ಎಂದು ತಿಳಿಸಿದರು.