ನವದೆಹಲಿ: ಖ್ಯಾತ ಕೆ-ಪಾಪ್ ಗಾಯಕಿ ಪಾರ್ಕ್ ಬೋರಮ್ ಏಪ್ರಿಲ್ 11, ಮಂಗಳವಾರ ನಿಧನರಾದರು ಎಂದು ಅವರ ಸಂಸ್ಥೆ ಕ್ಸಾನಾಡು ಎಂಟರ್ಟೈನ್ಮೆಂಟ್ ತಿಳಿಸಿದೆ. ಪ್ರಕಟಣೆಯ ಪ್ರಕಾರ, ಗೀತರಚನೆಕಾರ ಮತ್ತು ನಟ ಕೊರಿಯಾದಲ್ಲಿ ಹಠಾತ್ ನಿಧನರಾದರು ಅಂತ ತಿಳಿಸಿದೆ.
ಸದ್ಯ ಅವರ ಸಾವಿನ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು, ಸಾವಿಗೆ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ವರದಿಗಳ ಪ್ರಕಾರ, ಪಾರ್ಕ್ ಬೋ ರಾಮ್ ಈ ವರ್ಷದ ಕೊನೆಯಲ್ಲಿ ಎರಡು ಹೊಸ ಹಾಡುಗಳನ್ನು ಬಿಡುಗಡೆ ಮಾಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಪಾರ್ಕ್ ಬೋ ರಾಮ್ 2010 ರಲ್ಲಿ ‘ಸೂಪರ್ ಸ್ಟಾರ್ ಕೆ 2’ ಎಂಬ ಗಾಯನ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಮೂಲಕ 17 ನೇ ವಯಸ್ಸಿನಲ್ಲಿ ಕೆ-ಪಾಪ್ ಉದ್ಯಮಕ್ಕೆ ಪ್ರವೇಶಿಸಿದರು. ಆಗ ಅವರು ಆರ್ &ಬಿ ಸಂಗೀತವನ್ನು ಪ್ರೀತಿಸುವ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದರು.