ಬೆಳಗಾವಿ: ಉತ್ತರ ಕರ್ನಾಟಕದಿಂದ ಮುಂದಿನ ಸಿಎಂ ನಾನೇ ಅಂತ ಬಿಜೆಪಿ ಶಾಸಕ ಬಸವನ ಗೌಡ ಯತ್ನಾಳ್ ಹೇಳಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟಿ ಹಾಕಿದ್ದಾರೆ. ಅವರು ಅಥಣಿಯಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು.
ಇದೇ ವೇಳೆ ಅವರು ಮಾತನಾಡಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ದ ಕಿಡಿಕಾರಿ ಯಾವಗ್ಲೂ ಜಾರಕಿಹೊಳಿ ಕುಟುಂಬಕ್ಕೆ ಟಿಕೆಟ್ ಕೊಟ್ಟರೇ ನಾವೇನು ಘಂಟೆ ಹೊಡೆದುಕೊಂಡು ಕೂರಬೇಕಾ ಅಂತ ಹೇಳಿದರು. ಇನ್ನೂ ನಾನು ಹೋಗಿ ಅಪ್ಪಾಜಿ ಕಾಲಿಗೆ ಬೀಳುವವನು ಅಲ್ಲ ಅಂತ ನೇರವಾಗಿ ಬಿಎಸ್ವೈ ವಿರುದ್ದ ಕಿಡಿಕಾರಿದರು. ಇದಲ್ಲದೇ ಜಾರಕಿಹೊಳಿ ಕುಟುಂದವರಿಗೆ ಟಿಕೆಟ್ ನೀಡಿದರೆ ಬೇರೆಯವರು ಏನು ಮಾಡಬೇಕು ಅಂಥ ಪ್ರಶ್ನೆ ಮಾಡಿದರು.