ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಗಳು ನಡೆಯುತ್ತಿದ್ದು ಇದೀಗ ಕಲ್ಬುರ್ಗಿಯಲ್ಲಿ ಆಪರೇಷನ್ ಹಸ್ತ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಆಫ್ಜಲ್ಪುರ ತಾಲೂಕಿನ ಬಿಜೆಪಿಯ ಮಾಜಿ ಶಾಸಕ ಮಾಲಿಕೆಯ ಗುತ್ತೇದಾರ್ ಇದೀಗ ನಾಳೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ಬೆಂಗಳೂರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಯ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಜೊತೆಗೆ ಮಾಲೀಕಯ್ಯ ಗುತ್ತೇದಾರ ಮಾತುಕತೆ ನಡೆಸಿದ್ದು ಬಹುತೇಕ ಅವರು ನಾಳೆ ಕಲ್ಬುರ್ಗಿ ಸಮಾವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಉಡೆ ಎಂದು ಹೇಳಲಾಗುತ್ತಿದೆ.
ಖರ್ಗೆ ವಿರುದ್ಧ ಮಾಲಿಕೆಯ ಗುತ್ತೇದಾರ್ ತೊಡೆತಟ್ಟಿ ಬಿಜೆಪಿಗೆ ಹೋಗಿದ್ದರು ನಿನ್ನೆ ಅಷ್ಟೆ ಅವರ ಸಹೋದರ ನಿತೀನ್ ಗುತ್ತೇದಾರ ಅವರು ಬಿಜೆಪಿ ಗೆ ಸೇರ್ಪಡೆಯಾಗಿದ್ದರು. ಇದೀಗ ಇತ್ತ ಮಾಲಿಕಯ್ಯ ಗುತ್ತೇದಾರ್ ಗೆ ಕಾಂಗ್ರೆಸ್ ಗಾಳ ಹಾಕಿದ್ದು, ಕಲ್ಬುರ್ಗಿಯಲ್ಲಿ ಆಪರೇಷನ್ ಹಸ್ತ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ ನಾಳೆ ಕಲಬುರ್ಗಿಯಲ್ಲಿ ನಡೆಯುವ ಸಮಾವೇಶದಲ್ಲಿ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.