ಶಿವಮೊಗ್ಗ: ನಾಳೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ K.S ಈಶ್ವರಪ್ಪ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ನಾಳೆ ಎಲ್ಲಾ ಸಮುದಾಯದವರ ಜೊತೆಗೆ ಮೆರವಣಿಗೆ ಮೂಲಕ ನಾಮಪತ್ರವನ್ನು ಸಲ್ಲಿಸುವುದಾಗಿ ಹೇಳಿದರು.
ಇನ್ನೂ ಇದೇ ವೇಳೆ ಅವರು ಮಾತನಾಡಿ, ಯಾವುದೇ ಕಾರಣಕ್ಖೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ, ನಾನು ಚುನಾವಣೆಗೆ ಸ್ಪರ್ಧೆ ಮಾಡೇ, ಮಾಡುತ್ತೇನೆ ಅಂಥ ಹೇಳಿದರು. ಇನ್ನೂ ಹಾವೇರಿಯಿಂದ ತಮ್ಮ ಪುತ್ರ ಕಾಂತೇಶ್ಗೆ ಲೋಕಸಭಾ ಟಿಕೆಟ್ ಸಿಗದೇ ಇರುವುದರಿಂದ ಅವರು ಅಸಮಧಾನಗೊಂಡಿದ್ದು, ಬಹಿರಂಗವಾಗಿಯೇ ಬಿಎಸ್ವೈ ವಿರುದ್ದ ಮತ್ತು ಅವರ ಕುಟುಂಬ ರಾಜಕಾರಣವನ್ನು ಅವರು ಟೀಕೆ ಮಾಡುತ್ತ ಬಂದಿದ್ದಾರೆ.