ಮೈಸೂರು : ದೇಶದ ಇತಿಹಾಸದಲ್ಲಿ ಕರ್ನಾಟಕಕ್ಕೆ ಮೋದಿ ಸರ್ಕಾರ ನೀಡಿದಷ್ಟು ಅನುದಾನ ಹಿಂದೆ ಯಾವ ಸರ್ಕಾರವು ನೀಡಿಲ್ಲ.ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಎಷ್ಟು? ಕಳೆದ 10 ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ನೀಡಿದ ತೆರಿಗೆ ಪಾಲು, ಗ್ರ್ಯಾಂಟ್ ಮೂಲಕ ಎಷ್ಟು ಅನುದಾನ ನೀಡಿದೆ? ಈ ಕುರಿತು ಚರ್ಚೆ ಮಾಡಲು ನಾವು ಸಿದ್ಧರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧರಿದ್ದಾರೆಯೇ ಎಂದು ಮಾಜಿ ಶಾಸಕ ಸಿ.ಟಿ.ರವಿ ಸವಾಲು ಹಾಕಿದರು.
ಈ ರೀತಿ ‘ದೇವಿ ಮಾತಂಗಿ’ ಪೂಜೆ ಮಾಡಿದರೆ ಅದೃಷ್ಟ ತಾನಾಗೇ ಹುಡುಕಿಕೊಂಡು ಬರುತ್ತೆ
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೃಷ್ಣ ಭೈರೇಗೌಡ ಅವರ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಉತ್ತರ ಕೊಟ್ಟಿದ್ದಾರೆ. ಆದರೆ, ಅವರು ಚರ್ಚೆ ಮಾಡದೆ ಏಕಪಾತ್ರಾಭಿನಯ ಮಾಡಿದರು. ನಾವು ಅನುದಾನ ಕೊಟ್ಟಿದ್ದು ಸುಳ್ಳಾದರೆ ಚಾಮುಂಡೇಶ್ವರಿ ಮುಂದೆ ಪ್ರಮಾಣಮಾಡಲಿ ಎಂದು ಸವಾಲು ಹಾಕಿದ್ದೆ, ಯಾರೂ ಸ್ವೀಕರಿಸಲಿಲ್ಲ ಎಂದರು.
ಎಂಪಿ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ಧೂಳಿಪಟ ಆಗುತ್ತದೆ : ಬಿವೈ ವಿಜಯೇಂದ್ರ ಭವಿಷ್ಯ
ನೀತಿ ಸಂಹಿತೆ ಇರುವುದರಿಂದ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೂ ಪರಿಹಾರ ನೀಡಿಲ್ಲ. ಇಷ್ಟು ದಿನ ರಾಜ್ಯ ಸರ್ಕಾರ ಬಿಡುಗಡೆ ಮಾಡಿ ನಂತರ ಹೊಂದಾಣಿಕೆ ಮಾಡಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ ಆ ರೀತಿ ಮಾಡಿಲ್ಲ. ಬೆಲೆ ಏರಿಕೆಯಿಂದ ಬಡ್ಡಿ ರಹಿತವಾಗಿ 8 ಸಾವಿರ ಕೋಟಿ ಸಾಲ ನೀಡಿದರೂ ಮೂಲ ಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
‘ಪ್ರಧಾನಿ ಮೋದಿ’ ಭಾರತದ ಮುಖವಾಗಿದ್ದಾರೆ ; ಅಭಿವೃದ್ಧಿ, ಆರ್ಥಿಕತೆ ಸುಧಾರಿಸಿದೆ : ಯುಎಸ್ ಸಂಸದ
ಮೋದಿ ಇತರ ಪ್ರಧಾನಿಗಳಿಗಿಂತ ಹೆಚ್ಚಿನ ಅನುದಾನವನ್ನೇ ನೀಡಿದ್ದಾರೆ. ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಅಡಿಯಲ್ಲಿ ರಾಜ್ಯಕ್ಕೆ 800 ಕೋಟಿ ಮುಂಗಡ ಅನುದಾನ ನೀಡಲಾಗಿದೆ.ಈ ಕುರಿತು ದಾಖಲೆಗಳನ್ನೂ ಮುಂದಿಟ್ಟಿದ್ದೇವೆ. ನಿಮ್ಮ ದೃಷ್ಟಿಯಲ್ಲಿ ಹೆಚ್ಚು ಗ್ರ್ಯಾಂಟ್ ಕೊಟ್ಟವರು, ತೆರಿಗೆ ಪಾಲು ನೀಡಿದವರು ಅನ್ಯಾಯ ಮಾಡಿದ್ದಾರೆ ಎಂಬುದಾದರೆ ಮೊದಲು ನಿಮ್ಮ ದೃಷ್ಟಿ ದೋಷ ಸರಿಪಡಿಸಬೇಕಿದೆ ಎಂದು ಅವರು ವ್ಯಂಗ್ಯವಾಡಿದರು.