ಕೋಲಾರ : ಕ್ವಾರಿ ಹಳ್ಳದಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರು ಸಾವನನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲ್ಲಯ್ಯಪ್ಪನ ಹಳ್ಳಿ ಎಂಬ ಬಳಿ ಘಟನೆ ನಡೆದಿದೆ.
ಸಹೋದರರಾದ ಪವನ್ ಕುಮಾರ್ ಹಾಗೂ ಮಧು ಕುಮಾರ್ ಎನ್ನುವರು ನಿರುಪಾಲಾಗಿದ್ದಾರೆ. ಈಜಲು ತೆರಳಿದ್ದ ಸಂದರ್ಭದಲ್ಲಿ ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋಗಿ ಅಣ್ಣ ಕೂಡ ಇದೀಗ ಸಾವನ್ನಪ್ಪಿದ್ದಾನೆ.ಘಟನೆ ಕುರಿತಂತೆ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.