ಬೆಂಗಳೂರು : ಹಿಂದುಗಳ ವೋಟ್ ಅವಶ್ಯಕತೆ ಇಲ್ಲ ನಮಗೆ ಮುಸ್ಲಿಮರ ಓಟು ಸಾಕು ಎಂದು ನಕಲಿ ಪೋಸ್ಟ್ ವೈರಲ್ ಆಗಿದ್ದು, ಸಿಎಂ ಸಿದ್ದರಾಮಯ್ಯ ಹೇಳಿರುವಂತೆ ನಕಲಿ ಪೋಸ್ಟ್ ವೈರಲ್ ಆಗಿದ್ದು ಬೆಂಗಳೂರಿನ ಸಿಎಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು ಪತ್ರಿಕೆಯಲ್ಲಿ ವರದಿ ಬಂದಂತೆ ಕ್ರಿಯೇಟ್ ಮಾಡಿ ಇದೀಗ ಪೋಸ್ಟ್ ವೈರಲ್ ಮಾಡಲಾಗಿದೆ. ಹಿಂದೂಗಳ ವೋಟ್ ಅವಶ್ಯಕತೆ ಇಲ್ಲ. ನಮಗೆ ಕೇವಲ ಮುಸ್ಲಿಮರ ವೋಟುಗಳು ಸಾಕು ಎಂದು ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದಾರೆಂದು ನಕಲಿ ವರದಿಯ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ಇದೀಗ ಕಾಂಗ್ರೆಸ್ ಕಾನೂನು ಘಟಕದ ಹರೀಶ್ ನಾಗರಾಜು ಅವರಿಂದ ದೂರು ನೀಡಲಾಗಿದೆ.
ನಕಲಿ ಪೋಸ್ಟ್ ವೈರಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಪ್ರಭಾಕರ್, ವಸಂತ ಗಿಳೆಯರ ಸೇರಿದಂತೆ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇದೀಗ ಕಾಂಗ್ರೆಸ್ ಕಾನೂನು ಘಟಕದ ಹರೀಶ್ ನಾಗರಾಜು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಲ್ಲೂ ದೂರು ದಾಖಲು
ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇದೀಗ ಚಿಕ್ಕಮಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ಕಾಂಗ್ರೆಸ್ ನಿಂದ ಇದೀಗ ದೂರು ಸಲ್ಲಿಸಲಾಗಿದೆ. ಹಿಂದುಗಳ ಅಗತ್ಯ ನಮಗೆ ಬೇಡ ಮುಸ್ಲಿಮರ ಮತ ನಮಗೆ ಸಾಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿದೆ.
ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ನಾನು ಬಯಸುತ್ತೇನೆ.ಮುಸ್ಲಿಮರ ಓಲೆಗೆ ಕುರಿತು ಬಿಜೆಪಿಗೆ ತಲೆ ಕೆಡಿಸಿಕೊಳ್ಳಬೇಡಿ ಮುಸ್ಲಿಮರಾ ಪರ ಸಿಎಂ ಹೇಳಿಕೆ ನೀಡಿರುವ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ.ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದಂತೆ ಕ್ರಿಯೇಟ್ ಮಾಡಿ ಪೋಸ್ಟ್ ಮಾಡಲಾಗಿದೆ. ನಕಲಿ ಪೋಸ್ಟ್ ವೈರಲ್ ಮಾಡಿ ಸಿಎಂ ವಿರುದ್ಧ ಅಪಪ್ರಚಾರ ಆರೋಪ ಕೇಳಿ ಬಂದಿದ್ದು ಚಿಕ್ಕಮಂಗಳೂರು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದಿಂದ ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಲಾಗಿದೆ.