ಚಿಕ್ಕಮಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಂದ ನಂತರ ಒಂದು ರೂಪಾಯಿ ಅಭಿವೃದ್ಧಿ ಕೂಡ ಆಗಿಲ್ಲ ಕಾಂಗ್ರೆಸ್ ಸರ್ಕಾರದ ಕೆಲಸ ಕೊಡುವುದಕ್ಕಿಂತ ಹೆಚ್ಚು ಕಿತ್ತುಕೊಳ್ಳುವುದಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
BREAKING : “ಭ್ರಷ್ಟರೊಂದಿಗೆ ಕೈಜೋಡಿಸುವುದಿಲ್ಲ” : ‘AAP’ ತೊರೆದ ಸಚಿವ ‘ರಾಜ್ ಕುಮಾರ್ ಆನಂದ್’
ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆಯಲ್ಲಿ ಬಿವೈ ವಿಜಯೇಂದ್ರ ಮಾತನಾಡಿ, ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಮೋದಿ ಅವರು ಭಾರತವನ್ನು ದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಿದ್ದಾರೆ. ಮೋದಿ ಕೊಟ್ಟ ಪಡಿತರ ಅಕ್ಕಿಗೆ ತಮ್ಮ ಫೋಟೋ ಅಂಟಿಸಿದರು ಎಂದರು.
ಫೋಟೋ ಆಂಟಿಸಿ ಕಾಂಗ್ರೆಸ್ ಕೊಡುಗೆ ಅಂತ ತೋರಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬಿ ವೈ ವಿಜೇಂದ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಪಿ ಎಮ್ ಕಿಸಾನ್ ಯೋಜನೆಯ ರಾಜ್ಯ ಸರ್ಕಾರದ ಪಾಲು ನಿಲ್ಲಿಸಿದರು.ಕಾಂಗ್ರೆಸ್ ಸರ್ಕಾರ ಕೊಡುತ್ತಿರುವುದಕ್ಕಿಂತ ಕಿತ್ತುಕೊಳ್ಳುತ್ತಿರುವುದೇ ಹೆಚ್ಚು ಎಂದು ಟೀಕಿಸಿದರು.
ಕಾಂಗ್ರೆಸ್ ಆಫೀಸ್ ಅನ್ನು ನಾನು ಹೆಡ್ಡಾಫೀಸ್ ಮಾಡಿಕೊಳ್ಳಲು ಆಗುತ್ತದೆಯೇ? ಕಾಂಗ್ರೆಸ್ ಗೆ HD ಕುಮಾರಸ್ವಾಮಿ ತಿರುಗೇಟು
ದರೋಡೆ ಮಾಡುವ ಕೆಲಸ ರಾಜ್ಯ ಕಾಂಗ್ರೆಸ್ ಕೆಲಸ ಮಾಡುತ್ತಿದೆ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಒಂದು ರೂಪಾಯಿ ಅಭಿವೃದ್ಧಿ ಕೆಲಸವಾಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.