ಬೆಂಗಳೂರು : ಡಿಸಿಎಂ ಡಿಕೆಗೆ ಚುನಾವಣೆ ಅಧಿಕಾರಿ ಊಟ ಬಡಿಸಿದ್ದಕ್ಕೆ ಸೇರಿದಂತೆ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ಒಟ್ಟು 5 ದೂರುಗಳನ್ನು ಬಿಜೆಪಿ ದೂರು ಸಲ್ಲಿಸಿದೆ.
ಡಿಸಿಎಂ ಡಿಕೆ ಶಿವಕುಮಾರ್ ಗೆ ಚುನಾವಣಾ ಅಧಿಕಾರಿ ಊಟ ಬಡಿಸಿದ್ದರಿಂದ ಇದೀಗ ಚುನಾವಣೆ ಅಧಿಕಾರಿ ವಿರುದ್ಧ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಚುನಾವಣಾ ಅಧಿಕಾರಿ ವಿರುದ್ಧ ಇದೀಗ ದೂರು ಸಲ್ಲಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿ ಯೋಜನೆಯಾಗಿದ್ದರು ಎಂದು ಹೇಳಲಾಗುತ್ತಿದೆ.
ಅಲ್ಲದೆ ಗೀತಾ ನಿರ್ಮಿಸಿರುವ ರಣಗಲ್ ಚಿತ್ರದ ಜಾಹೀರಾತು ಮೊತ್ತವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕೆಂದು ಬಿಜೆಪಿ ದೂರು ನೀಡಿದೆ. ಗೀತ ಶಿವರಾಜಕುಮಾರ್ ಅವರು ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅಲ್ಲದೆ,,ಬಿಜೆಪಿ ಪ್ರಚಾರ ವಾಹನದಲ್ಲಿದ್ದ ಸಲಹಾ ಪೆಟ್ಟಿಗೆ ಸುಟ್ಟಿದ್ದಕ್ಕೆ ಬಿಜೆಪಿ ಮತ್ತೊಂದು ದೂರು ದಾಖಲಿಸಿದೆ.ಬೆಳಗಾವಿ ಜಿಲ್ಲೆಯ ಕುಡುಚಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ದಾವಣಗೆರೆಯಲ್ಲಿ ಕಾಂಗ್ರೆಸ್ ನಿಂದ ಅಕ್ಕಿ ಹಂಚಿಕೆ ಆರೋಪ ಮಾಡಿದ್ದು ಕಾಂಗ್ರೆಸ್ನಿಂದ ಅಕ್ಕಿ ಹಂಚುತ್ತಿರುವ ಕುರಿತಂತೆ ಬಿಜೆಪಿ ದೂರು ನೀಡಿದೆ ಎಂದು ತಿಳಿದುಬಂದಿದೆ.ಒಟ್ಟು 5 ದೂರುಗಳನ್ನು ಬಿಜೆಪಿ ನೀಡಿದೆ.