ಬೆಂಗಳೂರು : ಏಪ್ರಿಲ್ 3 ರಂದು ಬೆಂಗಳೂರಿನ ಸುಂಕದಕಟ್ಟೆಯ ಗೋವಿಂದಪ್ಪ ಬೇಕರಿ ರಸ್ತೆಯ ಬಳಿ ವ್ಯಕ್ತಿ ಒಬ್ಬನ ಮೇಲೆ ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
BREAKING : ಸಂದೇಶ್ಖಾಲಿಯಲ್ಲಿ ಅತ್ಯಾಚಾರ, ಭೂ ಕಬಳಿಕೆ ಆರೋಪಗಳ ಕುರಿತು ‘CBI ತನಿಖೆ’ಗೆ ಹೈಕೋರ್ಟ್ ಆದೇಶ
ಹೌದು ಆರೋಪಿಗಳಾದ ಶ್ರೀಧರ್, ಸಿದ್ದೇಶ್, ನಿತೀಶ್ ಅಲಿಯಾಸ್ ಶಿವು ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ. ಚಂದ್ರಕಾಂತ್ ಎನ್ನುವ ವ್ಯಕ್ತಿಯ ಮೇಲೆ ಬಂಧಿತ ಆರೋಪಿಗಳು ಕೊಲೆಗೆ ಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಚಂದ್ರಕಾಂತ್ ಹಾಗೂ ಶ್ರೀಧರ್ ಕಿದ್ವಾಯಿಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಕ್ಕೆ ಚಂದ್ರಕಾಂತ ಮೇಲೆ ಶ್ರೀಧರ್ ದ್ವೇಷ ಸಾಧಿಸುತ್ತಿದ್ದ ಎಂದು ತಿಳಿದುಬಂದಿದೆ.
ಚಾಮರಾಜನಗರ : ‘ಮಲೆ ಮಹದೇಶ್ವರ’ ಬೆಟ್ಟಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ : ಸ್ಥಳದಲ್ಲೇ ಸಾವು
ಹೀಗಾಗಿ ಶ್ರೀಧರ್ ಚಂದ್ರಕಾಂತ್ ಕೊಲೆಗೆ ಒಂದು ಲಕ್ಷ ಹಣಕ್ಕೆ ಸುಪಾರಿ ನೀಡಿದ ಎನ್ನಲಾಗಿದೆ. ಸುಪಾರಿ ಪಡೆದಿದ್ದ ನಿತೇಶ್ ಕಳ್ಳತನ ಸೇರಿ ಹಲವು ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಹೇಳಲಾಗುತ್ತಿದ್ದು, ಏಪ್ರಿಲ್ 3ರಂದು ಚಂದ್ರಕಾಂತ್ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆತನ ಮೇಲೆ ಇವರಿಬ್ಬರೂ ದಾಳಿ ಮಾಡಿದ್ದರು.
ಐರ್ಲೆಂಡ್ನ ಅತ್ಯಂತ ಕಿರಿಯ ಪ್ರಧಾನಿ ‘ಸೈಮನ್ ಹ್ಯಾರಿಸ್’ ಗೆ ಪ್ರಧಾನಿ ಮೋದಿ ಅಭಿನಂದನೆ
ಸುಂಕದಕಟ್ಟೆಯ ಗೋವಿಂದಪ್ಪ ಬೇಕರಿ ರಸ್ತೆಯಲ್ಲಿ ಚಂದ್ರಕಾಂತ ಮೇಲೆ ಹಲ್ಲೆ ನಡೆದಿತ್ತು.ಮಚ್ಚಿನಿಂದ ಚಂದ್ರಕಾಂತ್ ಹತ್ಯೆಗೆ ಯತ್ನಿಸಿ ಆರೋಪಿಗಳು ಪರಾರಿಯಾಗಿದ್ದರು ಕಾಮಾಕ್ಷಿಪಾಳ್ಯ ಠಾಣೆಗೆ ಹಳ್ಳಿಗೊಳಗಾದ ಚಂದ್ರಕಾಂತ ಈ ಕುರಿತಂತೆ ದೂರು ನೀಡಿದರು ಇದೀಗ ಕಾಮಾಕ್ಷಿಪಾಳ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.