ಬೆಂಗಳೂರು : ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ದಿನಾಂಕ 18-04-2024 ಮತ್ತು 19-04-2024 ರಂದು ನಡೆಸಲಾಗುವ ಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.
ಕೆಲವು ಅಭ್ಯರ್ಥಿಗಳು ಕೋಲಾರದಿಂದ ಕಲಬುರ್ಗಿ ಕೇಂದ್ರಕ್ಕೆ ಪರೀಕ್ಷಾ ಕೇಂದ್ರವನ್ನು ಬದಲಾಯಿಸಿಕೊಡಲು ಪ್ರಾಧಿಕಾರವನ್ನು ಕೋರಿ ಇಮೇಲ್ ಗಳನ್ನು ಸಲ್ಲಿಸುತ್ತಿದ್ದಾರೆ. ಅಭ್ಯರ್ಥಿಗಳು ಸಲ್ಲಿಸಿರುವ ಮನವಿ ಯನ್ನು ಪರಿಶೀಲಿಸ ಲಾಗಿದೆ. ಅರ್ಜಿಯನ್ನು ಎಡಿಟ್ ಮಾಡುವ ಸಂದರ್ಭದಲ್ಲಿ ಅಭ್ಯರ್ಥಿಗಳು ಅವರಾಗಿಯೇ ಕಲಬುರ್ಗಿ ಕೇಂದ್ರದಿಂದ ಕೋಲಾರ ಕೇಂದ್ರವನ್ನು ಆಯ್ಕೆ ಮಾಡಿರುವುದು ಕಾಣಸಿಗುತ್ತಿದೆ.
ಈ ರೀತಿ ತಪ್ಪಾಗಿ ಪರೀಕ್ಷಾ ಕೇಂದ್ರಗಳನ್ನು ಎಡಿಟ್ ಸಂದರ್ಭದಲ್ಲಿ ಬದಲಾಯಿಸಿ ಕೊಂಡಿರುವ ಅಭ್ಯರ್ಥಿಗಳ ವಿವರಗಳನ್ನು ಪ್ರಾಧಿಕಾರವು ಸಂಗ್ರಹಿಸುತ್ತಿದೆ.
ತಪ್ಪಾಗಿ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿರುವ ಅಂತಹ ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರ ಬದಲಾವಣೆಗೆ ಅವರುಗಳು ವ್ಯಾಸಂಗ ಮಾಡಿರುವ ಪಿಯು ಕಾಲೇಜಿನ ಪ್ರಿನ್ಸಿಪಾಲರ ಮುಖಾಂತರ ಸಕಾರಣವನ್ನು ನೀಡಿ ಮನವಿ ಸಲ್ಲಿಸಬೇಕು.
ಆದರೆ ಅಂತಹ ಅಭ್ಯರ್ಥಿಗಳು ಈ ಕೆಳಗಿನ ಕ್ರಮವನ್ನು ಪಾಲಿಸಬೇಕು.
1. ಪರೀಕ್ಷಾ ಕೇಂದ್ರ ಬದಲಾವಣೆ ಕೋರಿ ವ್ಯಾಸಂಗ ಮಾಡಿರುವ ಆಯಾ ಪಿಯು ಕಾಲೇಜಿನ ಪ್ರಿನ್ಸಿಪಾಲರ ಮೂಲಕ ಮನವಿ ಸಲ್ಲಿಸಬೇಕು.
2. ಮನವಿಯಲ್ಲಿ ಅಭ್ಯರ್ಥಿಯ ಹೆಸರು, ಅರ್ಜಿ ಸಂಖ್ಯೆ, ಸಿಇಟಿ ಪತ್ರ ಸಂಖ್ಯೆ, ಪ್ರವೇಶ ಪತ್ರದ ಪ್ರತಿ ಸಲ್ಲಿಸಬೇಕು.
3. ಆಯಾ ಕಾಲೇಜಿನ ಪ್ರಿನ್ಸಿಪಾಲರ ಇಂತಹ ಅಭ್ಯರ್ಥಿಗಳ ಪಟ್ಟಿ ಮಾಡಿ ಪ್ರಾಧಿಕಾರದ keauthority-ka@nic.in ಮೇಲ್‌ಗೆ ಸಲ್ಲಿಸಬೇಕು.
4. ಪ್ರಿನ್ಸಿಪಾಲರುಗಳು ಇಮೇಲ್ ಮೂಲಕ ಮನವಿ ಸಲ್ಲಿಸಲು ಕೊನೆಯ ದಿನಾಂಕ 12-04-2024 – ಸಂಜೆ 5.00
ಗಮನಿಸಿ:
1. ಅಭ್ಯರ್ಥಿಗಳು ವೈಯಕ್ತಿಕವಾಗಿ ಇಮೇಲ್ ಮೂಲಕ ಸಲ್ಲಿಸುವ ಮನವಿಯನ್ನು ಪುರಸ್ಕರಿಸುವುದಿಲ್ಲ. ವ್ಯಾಸಂಗ ಮಾಡಿರುವ ಆಯಾ ಪಿಯು ಕಾಲೇಜಿನ ಪ್ರಿನ್ಸಿಪಾಲರ ಮೂಲಕವೇ ಸಲ್ಲಿಸಬೇಕು.
2. ಕಲಬುರ್ಗಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಜೇವರ್ಗಿ, ಬೀದರ್, ಯಾದಗಿರಿಯಲ್ಲಿ ಪರೀಕ್ಷಾ ಕೇಂದ್ರ ಹಂಚಿಕೆಯಾಗಿದ್ದಲ್ಲಿ, ಸದರಿ ಅಭ್ಯರ್ಥಿಗಳು ಮನವಿ ಸಲ್ಲಿಸುವಂತಿಲ್ಲ.