ನವದೆಹಲಿ: ಷೇರುಪೇಟೆ ಮತ್ತೆ ಹೊಸ ಶಿಖರವನ್ನು ಮುಟ್ಟಿದ್ದು, ಸತತ ಎರಡನೇ ದಿನವೂ ಮಾರುಕಟ್ಟೆ ಐತಿಹಾಸಿಕ ಗರಿಷ್ಠ ಮಟ್ಟದಲ್ಲಿ ತೆರೆದುಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 75,000 ಗಡಿ ದಾಟಿದೆ. ಬ್ಯಾಂಕ್ ನಿಫ್ಟಿಯ ಏರಿಕೆ ಮುಂದುವರಿದಿದ್ದು ಇಂದು ಮತ್ತೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 48,812.15 ತಲುಪಿದೆ.
BSE ಸೆನ್ಸೆಕ್ಸ್ 381.78 ಪಾಯಿಂಟ್ ಅಥವಾ 0.51 ಶೇಕಡಾ ಏರಿಕೆಯೊಂದಿಗೆ 75,124.28 ನಲ್ಲಿ ಪ್ರಾರಂಭವಾಯಿತು ಮತ್ತು ಮೊದಲ ಬಾರಿಗೆ 75,000 ದಾಟಿದೆ. NSE ಯ ನಿಫ್ಟಿ 98.80 ಪಾಯಿಂಟ್ ಅಥವಾ 0.44 ಶೇಕಡಾ ಏರಿಕೆಯೊಂದಿಗೆ 22,765.10 ಮಟ್ಟದಲ್ಲಿ ಪ್ರಾರಂಭವಾಯಿತು ಮತ್ತು ಇದು ನಿಫ್ಟಿಯ ಸಾರ್ವಕಾಲಿಕ ಗರಿಷ್ಠವಾಗಿದೆ.