ಬೆಂಗಳೂರು : ಬೆಂಗಳೂರು ಕೇಂದ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪಿ ಸಿ ಮೋಹನ್ಗೆ ವೋಟ್ ಕೇಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರು ಹೇಳುತ್ತಿದ್ದಾರೆ ಆದರೆ ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಲೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಂಗಾಳದಲ್ಲಿ ಬಿಜೆಪಿ ನಂ.1 ಪಕ್ಷವಾಗಬಹುದು : ಚುನಾವಣಾ ಚಾಣಕ್ಯ ‘ಪ್ರಶಾಂತ್ ಕಿಶೋರ್’ ಭವಿಷ್ಯ
ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪರ ಅಲೆ ಇಲ್ಲ ಎಂದು ಮನ್ಸೂರ್ ಅಲಿ ಖಾನ್ ಪರ ರೋಡ್ ಶೋ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಸಂಸದ ಪಿ ಸಿ ಮೋಹನ್ ಯಾವತ್ತಾದರೂ ಈ ಕಡೆ ಬಂದಿದ್ದಾರಾ? ವೋಟ್ ಕೊಡಲ್ಲ ಅಂತ ನರೇಂದ್ರ ಮೋದಿ ಅವರ ಹೆಸರು ಹೇಳುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಕೇಂದ್ರದ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ.ಹಣಕಾಸು ಆಯೋಗ ಶಿಫಾರಸು ಮಾಡಿದರು ಕೂಡ ರಾಜ್ಯಕ್ಕೆ ಅನುದಾನ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೂ ಕೇಂದ್ರ ಸರ್ಕಾರ ಹಣ ನೀಡಿಲ್ಲ. ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಕೂಡ ಬಿಜೆಪಿ ಸಂಸದರು ಬಾಯಿಬಿಟ್ಟಿಲ್ಲ. ಈ ಕುರಿತಂತೆ ಪಿ ಸಿ ಮೋಹನ್ ಕರ್ನಾಟಕದ ಬಗ್ಗೆ ಒಂದು ದಿನವೂ ಮಾತನಾಡಿಲ್ಲ ಎಂದು ಕಿಡಿ ಕಾರಿದರು.
ಬೆಂಗಳೂರಿಗೆ ಕುಡಿಯುವ ನೀರು ಬೇಕೆಂದು ಪಾದಯಾತ್ರೆ ಮಾಡಿದ್ವಿ ಅವರದ್ದೇ ಸರ್ಕಾರದ ಎಂಪಿಗಳು ಅನುಮತಿ ಕೊಡಿ ಎಂದು ಕೇಳಲಿಲ್ಲ. ನಿಮಗೆಲ್ಲಾ ಕುಡಿಯಲು ನೀರು ಬೇಕು ಬೇಡವೋ? ಹಾಗಾದರೆ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರನ್ನು ಗೆಲ್ಲಿಸಿ ಎಂದು ಬೆಂಗಳೂರಿನಲ್ಲಿ ರೋಡ್ ಶೋ ವೇಳೆ ಸಿಎಂ ಸಿದ್ದರಾಮಯ್ಯ ಮತಯಾಚನೆ ಮಾಡಿದರು.