ರಾಮನಗರ : ಸಮಾಜದಲ್ಲಿ ಆದಾಗ ವೈದ್ಯಕೀಯ ಲೋಕಕ್ಕೂ ಸವಾಲು ಹಾಗೂ ಅಚ್ಚರಿಗೊಳಿಸುವಂತಹ ಘಟನೆಗಳು ಜರುಗುತ್ತವೆ.ಇದೀಗ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹುಚ್ಚದೊಡ್ಡಯ್ಯನ ಹಳ್ಳಿ ಎಂಬ ಗ್ರಾಮದಲ್ಲಿ ವೈದ್ಯಕೀಯ ಲೋಕಕ್ಕೆ ಅಚ್ಚರಿ ಆಗುವಂಥ ಘಟನೆ ನಡೆದಿದ್ದು, ಸತ್ತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಎಂದು ಕೊಂಡೊಯ್ಯುವಾಗ ತಕ್ಷಣ ಸತ್ತಿರುವ ವ್ಯಕ್ತಿ ಎದ್ದು ಕುಳಿತಿರುವ ಅಚ್ಚರಿಯ ಘಟನೆ ನಡೆದಿದೆ.
ಹೌದು ರಾಮನಗರ ಜಿಲ್ಲೆಯಲ್ಲಿ ಒಂದು ವೈದಿಕೀಯ ಲೋಕದ ಅಚ್ಚರಿ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನ ದೊಡ್ಡಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.ಬೆಳಗ್ಗೆ 6.30ಕ್ಕೆ ಕುಸಿದು ಬಿದ್ದು 55 ವರ್ಷದ ಶಿವರಾಮು ಎಂಬ ವ್ಯಕ್ತಿ ಸಾವನಪ್ಪಿದ್ದರು. ವೈದ್ಯರು ಸಹ ಆತ ಮೃತಪಟ್ಟಿದ್ದನ್ನು ದೃಢಪಡಿಸಿದ್ದರು. ಶಿವರಾಮ ಹೃದಯ ಘಾತದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದರು.
ಈ ಕುರಿತಂತೆ ಸಂಬಂಧಿಕರಿಗೆ ಶಿವರಾಮ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದರು. ಆದರೆ ಶವಸಂಸ್ಕಾರಕ್ಕೆ ಕೊಂಡೊಯ್ಯುವಾಗ ಶಿವರಾಮ ತಕ್ಷಣ ಎದ್ದು ಕುಳಿತಿದ್ದಾನೆ. ಶಿವರಾಮು ಎದುರುತ್ತಿದ್ದಂತೆ ವೈದ್ಯರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ವೈದರಿಂದ ಶಿವರಾಮ ದೇಹ ಸ್ಥಿತಿ ಬಗ್ಗೆ ತಪಾಸಣೆ ನಡೆಸಿದರು. ಹಾರ್ಟ್ ಅಟ್ಯಾಕ್ ಆಗುತ್ತಿದೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಕುಟುಂಬ ಸದಸ್ಯರು ಜಯದೇವ್ ಆಸ್ಪತ್ರೆಗೆ ಕರೆದೋಯ್ದಿದ್ದಾರೆ. ಮಾರ್ಗಮಧ್ಯ ಮತ್ತೆ ಕೂಲಿ ಕಾರ್ಮಿಕ ಶಿವರಾಮು ಕೊನೆಯುಸಿರೇಳಿದ್ದಾನೆ ಎಂದು ತಿಳಿದುಬಂದಿದೆ.
ಶಿವರಾಮ ಶವವನ್ನು ಮತ್ತೆ ಹುಚ್ಚಯ್ಯನ ದೊಡ್ಡಿಗೆ ಸಂಬಂಧಿಕರು ಕರೆದು ತಂದಿದ್ದಾರೆ. ಇದೀಗ ಸಂಬಂಧಿಕರು ಮತ್ತೆ ಜೀವ ಬರುವುದೆಂದು ಮನೆಯ ಬಳಿ ಶವ ಬಿಟ್ಟು ಕಾಯುತ್ತಿದ್ದಾರೆ. ಮತ್ತೊಂದೆಡೆ ಶವ ಸಂಸ್ಕಾರಕ್ಕೆ ಗ್ರಾಮಸ್ಥರು ಸಿದ್ಧತೆ ನಡೆಸುತ್ತಿರುವ ಘಟನೆ ನಡೆದಿದೆ.ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.