ಬೆಂಗಳೂರು: ನೋಂದಣಿಯಾಗದ ನೇಮಕಾತಿ ಏಜೆಂಟರು ಒದಗಿಸುವ ನಕಲಿ ಉದ್ಯೋಗದ ಕೊಡುಗೆಗಳಿಂದ ವಂಚನೆಗೆ ಒಳಗಾಗುವ ವಿದೇಶಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ ಮತ್ತು ಹೆಚ್ಚುವರಿಯಾಗಿ ರೂ.2 ಲಕ್ಷದಿಂದ ರಿಂದ 5 ಲಕ್ಷಗಳವರೆಗೆ ಶುಲ್ಕ ವಿಧಿಸುವುದು ಕೂಡಾ ಕಂಡು ಬಂದಿದೆ. ಈ ನೋಂದಾಯಿಸದ / ಅಕ್ರಮ ಏಜೆಂಟ್‍ಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿರುತ್ತಾರೆ, ವಿದೇಶದಲ್ಲಿ ಕೆಲಸ ಮಾಡಲು ನೇಮಕಾತಿ ಮಾಡುವುದಕ್ಕೆ ಏಜೆನ್ಸಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಹಲವು ಅಕ್ರಮ ಏಜೆಂಟ್‍ಗಳು ಫೇಸ್‍ಬುಕ್, ವಾಟ್ಸಾಪ್, ಟೆಕ್ಸ್ಟ್ ಮೆಸೇಜ್ ಮತ್ತು ಇತರ ಮಾಧ್ಯಮಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಏಜೆನ್ಸಿಗಳು ಅವರ ಇರುವಿಕೆ ಮತ್ತು ಅವರನ್ನು ಸಂಪರ್ಕಿಸುವ ಬಗ್ಗೆ ಬಹಳ ಕಡಿಮೆ ವಿವರಗಳನ್ನು ಒದಗಿಸುತ್ತವೆ ಅಥವಾ ಯಾವುದೇ ವಿವರಗಳನ್ನು ಒದಗಿಸುವುದಿಲ್ಲ. ಅವರು ಸಾಮಾನ್ಯವಾಗಿ ಕೇವಲ ವಾಟ್ಸಾಪ್ ಮೂಲಕ ಮಾತ್ರವೇ ಸಂವಹನ ನಡೆಸುತ್ತಾರೆ. ಇದರಿಂದಾಗಿ ಕರೆ ಮಾಡಿದವರ ಸ್ಥಳವನ್ನು ಮತ್ತು ಅವರನ್ನು ಗುರುತಿಸುವುದು ಮತ್ತು ಅವರು ಕೊಡಮಾಡುವ ಕೆಲಸದ ಕುರಿತಂತೆ ಅದರ ನೈಜತೆಯನ್ನು ಖಚಿತಪಡಿಸಿಕೊಳ್ಳುವುದು ಕಷ್ಟವಾಗುತ್ತದೆ. ಅಂತಹ ಏಜೆಂಟ್‍ಗಳು ಕಾರ್ಮಿಕರನ್ನು ಕಷ್ಟಕರ ಮತ್ತು ಜೀವಕ್ಕೆ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಅಮಿಷವೊಡ್ಡುತ್ತಾರೆ. ಹಲವಾರು ಪೂರ್ವ ಯುರೋಪಿಯನ್ ರಾಷ್ಟ್ರಗಳು, ಕೆಲವು ಗಲ್ಸ್ ರಾಷ್ಟ್ರಗಳು, ಮಧ್ಯ ಏμÁ್ಯದ ದೇಶಗಳು, ಇಸ್ರೇಲ್, ಕೆನಡಾ, ಮ್ಯಾನ್ಮಾರ್ ಮತ್ತು ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ನಲ್ಲಿ ಕೆಲಸ ಮಾಡಲು ನೇಮಕಾತಿಗಾಗಿ ಆಮಿಷವೊಡ್ಡುವ ಇಂತಹ ಪ್ರಕರಣಗಳು ವರದಿಯಾಗುತ್ತಿವೆ.
ಮಾನ್ಯತೆ ಇರುವ ಉದ್ಯೋಗಾವಕಾಶಗಳು ಎಂದರೆ ಅದು ನೇಮಕಾತಿ ಏಜೆಂಟ್, ವಿದೇಶದಲ್ಲಿರುವ ಉದ್ಯೋಗದಾತ, ಮತ್ತು ವಲಸೆ ಹೋಗಲು ಬಯಸುವ ಕೆಲಸಗಾರ ಈ ಮೂವರೂ ಸಹಿ ಮಾಡಿದ ಒಂದು ಉದ್ಯೋಗ ಒಪ್ಪಂದದ ಜೊತೆಗೆ ಬರುತ್ತದೆ. ಅಂತಹ ಉದ್ಯೋಗದ ಒಪ್ಪಂದ ಪತ್ರದಲ್ಲಿ. ನೀಡಲಾಗುವ ಕೆಲಸಕ್ಕೆ ಸಂಬಂಧಪಟ್ಟ ನಿಯಮಗಳು, ಷರತ್ತುಗಳು, ಸಂಬಳ ಮತ್ತು ಇತರ ಭತ್ಯೆಗಳನ್ನು ನಮೂದಿಸಬೇಕು. ಮಾನ್ಯತೆ ಇರುವ ಉದ್ಯೋಗಾವಕಾಶಗಳು ಪ್ರವಾಸಿ ವೀಸಾವನ್ನು ಹೊರತುಪಡಿಸಿ ಉದ್ಯೋಗ ವೀಸಾ, ಕೆಲಸದ ವೀಸಾ ಅಥವಾ ಇತರ ರೀತಿಯ ವೀಸಾಗಳ ಆಧಾರದ ಮೇಲೆ ವಲಸೆ ಹೋಗಲು ಅವಕಾಶ ನೀಡಬೇಕು. ಪ್ರವಾಸಿ ವೀಸಾವನ್ನು ಪ್ರವಾಸೋದ್ಯಮದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂಬುದನ್ನು ಗಮನಿಸಿ. ಸಾಮಾನ್ಯವಾಗಿ, ಪ್ರತಿಷ್ಠಿತ ವಿದೇಶಿ ಉದ್ಯೋಗದಾತರು ವಿಮಾನ ದರ, ಊಟ, ವಸತಿ ಮತ್ತು ವಿಮೆಯ ವೆಚ್ಚವನ್ನು ಒದಗಿಸುತ್ತಾರೆ.
ವಲಸೆ ಹೋಗಲು ಬಯಸುವ ಕಾರ್ಮಿಕರು ಅವರು ಹೋಗಬೇಕಾಗಿರುವ ದೇಶದ ಸ್ಥಳೀಯ ಪರಿಸ್ಥಿತಿಗಳ ಬಗ್ಗೆ ಸ್ವತಃ ತಿಳಿದುಕೊಳ್ಳಬೇಕು. ಇದರ ಬಗ್ಗೆ ಮಾಹಿತಿಯನ್ನು ಅವರು ನಿರ್ಗಮನ-ಪೂರ್ವ ಓರಿಯಂಟೇಶನ್ ತರಬೇತಿ (ಪಿ.ಡಿ.ಓ.ಟಿ) ಕೇಂದ್ರಗಳಿಗೆ ಹಾಜರಾಗುವ ಮೂಲಕ ಅಥವಾ ಅವರು ಹೋಗಬೇಕಾಗಿರುವ ವಿದೇಶದ ಭಾರತೀಯ ರಾಯಭಾರ ಕಚೇರಿಯ ಸಮುದಾಯ ಕಲ್ಯಾಣ ವಿಭಾಗದಿಂದ ಪಡೆಯಬಹುದು. ನೋಂದಾಯಿತ ನೇಮಕಾತಿ ಏಜೆಂಟರು ವಲಸೆ ಕಾರ್ಮಿಕರಿಗೆ ಪ್ರವಾಸಿ ಭಾರತೀಯ ವಿಮಾ ಯೋಜನೆಯನ್ನು (ಪಿಬಿಬಿವೈ) ಖರೀದಿಸುವುದನ್ನು ಭಾರತ ಸರ್ಕಾರವು ಕಡ್ಡಾಯಗೊಳಿಸಿದೆ. ಈ ವಿಮಾ ಯೋಜನೆಗೆ ಒಂದು ಬಾರಿ ಪ್ರೀಮಿಯಂ ಪಾವತಿಸಬೇಕಾಗಿದ್ದು (ಎರಡು ವರ್ಷಗಳ ವಿಮೆಗೆ ರೂ. 275 ಮತ್ತು ಮೂರು ವರ್ಷಗಳ ವಿಮೆಗೆ ರೂ. 375) ಇದು ಸಾವಿನ ಪ್ರಕರಣಗಳಲ್ಲಿ ಮತ್ತು ಕೆಲಸಕ್ಕೆ ಸಂಬಂಧಿಸಿದ ಗಾಯ ಮತ್ತು ವೈದ್ಯಕೀಯ ವೆಚ್ಚಗಳ ಮೇಲೆ 10 ಲಕ್ಷ ಮೊತ್ತದ ವಿಮೆಯೂ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ.
ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ವಿದೇಶದಲ್ಲಿ ಉದ್ಯೋಗವನ್ನು ಬಯಸುವವರು ನೋಂದಾಯಿತ ನೇಮಕಾತಿ ಏಜೆಂಟ್‍ಗಳು (ಆರ್.ಎ) ಒದಗಿಸುವ ಸುರಕ್ಷಿತ ಮತ್ತು ಕಾನೂನು ಸೇವೆಗಳನ್ನು ಮಾತ್ರ ಬಳಸಿಕೊಳ್ಳುವಂತೆ ವಿನಂತಿಸಲಾಗಿದೆ. ಎಲ್ಲಾ ನೋಂದಾಯಿತ ಆರ್.ಎ.ಗಳಿಗೆ ಪರವಾನಗಿ ಸಂಖ್ಯೆಯನ್ನು ನೀಡಲಾಗುತ್ತದೆ, ಅದನ್ನು ಅವರ ಕಚೇರಿ ಅವರಣದಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ಅವರ ಜಾಹೀರಾತುಗಳಲ್ಲಿ ಎದ್ದು ಕಾಣುವಂತೆ ಪ್ರಕಟಿಸಲಾಗುತ್ತದೆ.
ವಲಸೆ ಹೋಗಲು ಬಯಸುವವರು ಸರ್ಕಾರಿ ವೆಬ್ ಸೈಟ್ www.emigrate.gov.in ಗೆ ಭೇಟಿ ನೀಡುವ ಮೂಲಕ ಮತ್ತು ಸಕ್ರಿಯ ಆರ್.ಎ.ಪಟ್ಟಿ” ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇಮಕಾತಿ ಏಜೆಂಟ್‍ಗಳ ನೈಜತೆಯನ್ನು ಪರಿಶೀಲಿಸುವಂತೆ ಸಲಹೆ ನೀಡಲಾಗುತ್ತದೆ. ವಲಸೆ ಕಾಯಿದೆ, 1983 ರ ಪ್ರಕಾರ, ಯಾವುದೇ ನೇಮಕಾತಿ ಏಜೆಂಟ್ ಭಾವೀ ವಲಸಿಗರಿಂದ ಆ ವಲಸಿಗರಿಗೆ ಒದಗಿಸಿದ ಸೇವೆಗಳಿಗೆ ಸಂಬಂಧಿಸಿದಂತೆ ರೂ. 30,000 + ಜಿ.ಎಸ್.ಟಿ (18%) ಮೀರಿ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ ಮತ್ತು ನೇಮಕಾತಿ ಏಜೆಂಟ್ ಪಡೆದ ಮೊತ್ತಕ್ಕೆ ವಲಸಿಗರಿಗೆ ರಶೀದಿಯನ್ನು ನೀಡಬೇಕು. ನೇಮಕಾತಿಯ ಯಾವುದೇ ಇತರ ಚಾನೆಲ್ ಮೂಲಕ ವಿದೇಶಕ್ಕೆ ಹೋಗುವುದೆಂದರೆ ಅದು ಹಣದ ವಂಚನೆಗೆ ಒಳಗಾಗುವ ಮತ್ತು ಏಜಂಟ್ ವಾಗ್ದಾನ ಮಾಡಿದ ಉದ್ಯೋಗದ ಹೊರತಾಗಿ ಬೇರೆ ಕೆಲಸಕ್ಕೆ ಸೇರಬೇಕಾಗಿ ಬರುವ ಮತ್ತು ವಿದೇಶದಲ್ಲಿ ಕಷ್ಟಕರವಾದ ಜೀವನ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬರುವ ಗಂಭೀರ ಅಪಾಯವನ್ನು ಒಳಗೊಂಡಿರುತ್ತದೆ.
ನೋಂದಾಯಿಸಿಕೊಳ್ಳದ ಎಲ್ಲಾ ಏಜೆನ್ಸಿಗಳಿಗೆ ಸಾಗರೋತ್ತರ ನೇಮಕಾತಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಅಂತಹ ಚಟುವಟಿಕೆಗಳು ವಲಸೆ ಕಾಯಿದೆ, 1983ರ ಉಲ್ಲಂಘನೆಯಾಗಿದೆ ಮತ್ತು ಅದು ಮಾನವ ಕಳ್ಳಸಾಗಣೆಗೆ ಸಮಾನವಾಗಿದ್ದು, ಒಂದು ಶಿಕ್ಷಾರ್ಹ ಕ್ರಿಮಿನಲ್ ಅಪರಾಧವಾಗಿದೆ. ಯಾವುದೇ ದೂರುಗಳು ಮತ್ತು ಪ್ರಶ್ನೆಗಳಿದ್ದಲ್ಲಿ Pravasi Bharatiya Sahayata Kendra (PBSK), Ministry of External Affairs, Room No. 1005, 10th floor, Akbar Bhavan, Chanakyapuri, New Delhi-100021. Toll Free No. 1800 11 3090 (Accessible from India only). Chargeable No: +91-11-2688-5021 (Standard Long distance call charges apply). Whattsapp No. +91-7428 3211 44/ E-mail: helpline@mea.gov.in Or Office of Protector General of Emigrants, Ministry of External Affairs, Room No. 1009, 10th Floor, Akbar Bhavan, Chanakyapuri, New Delhi-100021. Email: pge@mea.gov.in/ diroe1@mea.gov.in Or Office of Protector of Emigrants, Bengaluru, Ministry of External Affairs, Govt. of India, First Floor, Regional Passport Office Building, 80ft Road, 8th Block, Koramangala, Bengaluru, Karnataka – 560095 Email: poebengaluru@mea.gov.in UÉ ¸ÀA¥ÀQð¸ÀĪÀÅzÀÄ