ಬೆಂಗಳೂರು: ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು, ಕನ್ನಡಿಗರಿಗೆ ನೈಜ. .ತರ್ಕ ಬದ್ಧ ಹಾಗೂ ಮೌಲ್ಯಯುತ ಸುದ್ದಿಗಳನ್ನ ಹೊತ್ತು ತರಲು ಗ್ಯಾರಂಟಿ ನ್ಯೂಸ್ ಸಜ್ಜಾಗಿದೆ. ಕನ್ನಡಿಗರ ಹೆಮ್ಮೆಯ ನ್ಯೂಸ್ ಚಾನಲ್ “ಗ್ಯಾರಂಟಿ ನ್ಯೂಸ್” ಹೆಸರು ಹಾಗೂ ಲೋಗೋವನ್ನ ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ಅನಾವರಣಗೊಳಿಸಿದರು. ಈ ವೇಳೆ ಖ್ಯಾತ ನಟ ರಾಘವೇಂದ್ರ ರಾಜ್ ಕುಮಾರ್, ಗ್ಯಾರಂಟಿ ನ್ಯೂಸ್ ವೆಬ್ ಸೈಟ್ ಲಾಂಚ್ ಮಾಡಿದ್ರು.
ಲೋಗೋ ಅನಾವರಣಗೊಳಿಸಿ ಮಾತನಾಡಿದ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್, ಮಾಧ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿರುವ ತಂಡವೇ ಗ್ಯಾರಂಟಿ ನ್ಯೂಸ್ ಚಾನಲ್ ಆರಂಭ ಮಾಡುತ್ತಿದ್ದಾರೆ. ಇತರ ಮಾಧ್ಯಮಗಳಿಗಿಂತ ವಿಭಿನ್ನವಾಗಿ ಮೂಡಿ ಬರುವ ವಿಶ್ವಾಸ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ನೀವು ದೊಡ್ಡ ಸವಾಲನ್ನೇ ಸ್ವೀಕಾರ ಮಾಡಿದ್ದೀರಿ. ಜನತೆಗೆ ನೈಜ ಸುದ್ದಿಗಳನ್ನ ನೀಡುವ ವಿಶ್ವಾಸ. ಇಂದಿನ ಅನೇಕ ಸುದ್ದಿ ಮಾಧ್ಯಮಗಳು, ಸುದ್ದಿ ನೀಡುವ ಭರದಲ್ಲಿ ಜಡ್ಜ್ಮೆಂಟ್ ನೀಡುವ ಅಭ್ಯಾಸ ಶುರುವಾಗಿದೆ. ಸುದ್ದಿ ಮಾಧ್ಯಮವಾಗಿ ಸುದ್ದಿಯನ್ನ ಬಿತ್ತರಿದಸಬೇಕು. ಅದರ ನ್ಯಾಯದ ನಿರ್ಧಾರ ಜನರಿಗೆ ಬಿಡಬೇಕು ಎಂದು ತಿಳಿಸಿದರು.
ಗ್ಯಾರಂಟಿ ನ್ಯೂಸ್ ಡಿಜಿಟಲ್ ಮೀಡಿಯಾಗೆ ಚಾಲನೆ ಕೊಟ್ಟು ಮಾತ್ನಾಡಿದ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್, ನಮ್ಮ ಕುಟುಂಬ ಮಾಧ್ಯಮಗಳಿಗೆ ಸದಾ ಋಣಿಯಾಗಿದೆ. ಡಾ.ರಾಜ್ ಕುಮಾರ್ ಅಪಹರಣ ಆದಾಗ ಮಾಧ್ಯಮಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ತಿಂಗಳು ಅಣ್ಣಾವ್ರ ಹುಟ್ಟಿದ ಹಬ್ಬವಿದೆ, ಹೀಗಾಗಿ ನಿಮ್ಮ ಚಾನಲ್ ಸಹ ಗ್ಯಾರಂಟಿ ಸಕ್ಸಸ್ ಸಿಗಲಿದೆ. ನಿಮ್ಮ ಪ್ರಯತ್ನಕ್ಕೆ ಮತ್ತು ಶ್ರಮಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಇದೇ ವೇಳೆ ಮಾತ್ನಾಡಿದ ಗ್ಯಾರಂಟಿ ನ್ಯೂಸ್ ಚಾನಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಟಿ.ಎಂ. ಶಿವಸ್ವಾಮಿ, ಕರ್ನಾಟಕದಲ್ಲಿ ಹೊಸ ಟ್ರೆಂಡ್ ಶುರುವಾಗೋದು ಗ್ಯಾರಂಟಿ ಅದ್ರು. ಕಳೆದ 20 ವರ್ಷಗಳ ಅನುಭವವ ಹಂಚಿಕೊಂಡ ಶಿವಸ್ವಾಮಿ, ಕನ್ನಡ ಮಾಧ್ಯಮ ಲೋಕದ ದಿಗ್ಗಜರ ಜೊತೆ ಕೆಲಸ ಮಾಡಿದ್ದೇವೆ. ಹಲವು ಚಾನಲ್ಗಳನ್ನ ಕಟ್ಟಿ, ಬೆಳೆಸಿದ ಅನುಭವವಿದೆ. ನಮ್ಮ ಜೊತೆ ಅತ್ಯುತ್ತಮ ತಂಡವಿದ್ದು, ಸುದ್ದಿ ಕ್ರಾಂತಿ ಮಾಡೋದಂತೂ ಗ್ಯಾರಂಟಿ ಅಂದ್ರು. ಕರ್ನಾಟಕ ಜನತೆ ಒಪ್ಪುವಂತ, ಮೆಚ್ಚುವಂತ, ಜನರಿಗೆ ಇಷ್ಟವಾಗುವಂತೆ ನ್ಯೂಸ್ ಪ್ರಸಾರ ಮಾಡೋದಾಗಿ ಗ್ಯಾರಂಟಿ ನೀಡಿದ್ರು.
ಇನ್ನು ಗ್ಯಾರಂಟಿ ನ್ಯೂಸ್ ವಾಹಿನಿ ಪ್ರಧಾನ ಸಂಪಾದಕರಾದ ರಾಧಾ ಹಿರೇಗೌಡರ್ ಮಾತನಾಡಿ, ಪತ್ರಕರ್ತರೇ ಸೇರಿ ಆರಂಭಿಸುತ್ತಿರುವ ವಾಹಿನಿ. ಯಾವುದೇ ಪಕ್ಷ ಪರವಾಗಲಿ.. ವಿರುದ್ಧವಾಗಲಿ ನಾವಿಲ್ಲ. ಯಾರ ಹಂಗಿನಲ್ಲೂ ನಾವಿಲ್ಲ. ಯಾವುದೇ ಸಿದ್ಧಾಂತಗಳಿಗೆ ನಾವು ಜೋತು ಬೀಳಲ್ಲ.. ನಾವು ಜನರ ಪರವಾಗಿ ಕೆಲಸ ಮಾಡಲು ಬರುತ್ತಿದ್ದೇವೆ. ಜನರ ಸಮಸ್ಯೆಗಳಿಗೆ ಧ್ವನಿಯಾಗಲು ಬರುತ್ತಿದ್ದೇವೆ ಅಂತ ತಿಳಿಸಿದರು.
ಸಂಪಾದಕರಾದ ಸತೀಶ್ ಆಂಜಿನಪ್ಪ ಮಾತನಾಡಿ, ಮಾಧ್ಯಮ ಕ್ಷೇತ್ರಗಳಲ್ಲಿ ಅಪಾರ ಅನುಭವ ಇರುವ ತಂಡವೇ ನಮ್ಮ ಬೆನ್ನಿಗಿದೆ. ಅನುಭವದ ಜೊತೆ ಯುವ ಪತ್ರಕರ್ತರಿಗೂ ನಾವು ಪ್ರೋತ್ಸಾಹ ನೀಡಲಿದ್ದೇವೆ. ಶೀಘ್ರವೇ ಸ್ಯಾಟಲೈಟ್ ಚಾನಲ್ ಆಗಿ ನಿಮ್ಮ ಮನೆಗಳಿಗೆ ಬರಲಿದ್ದೇವೆ. ಬೆಂಗಳೂರು ಹಾಗೂ ಜಿಲ್ಲಾ ಮಟ್ಟದಲ್ಲೂ ತಂಡಗಳು ತಯಾರಾಗುತ್ತಿವೆ. ಬರೀ ರಾಜಕೀಯ ಮಾತ್ರವಲ್ಲದೆ, ಎಲ್ಲಾ ಕ್ಷೇತ್ರಗಳ ಸುದ್ದಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ನಮ್ಮ ವಾಹಿನಿಯು ಕಾರ್ಯನಿರ್ವಹಿಸಲಿದೆ ಅಂತ ತಿಳಿಸಿದರು.
ಸಿನೀಯರ್ ಎಡಿಟರ್ ಅರವಿಂದ್ ಸಾಗರ್ ಮಾತಾಡಿ, ಅತ್ಯುತ್ತಮ ತಂಡದೊಂದಿಗೆ ನಿಮ್ಮ ಮುಂದೆ ಬರ್ತಿದ್ದೇವೆ. ಕರ್ನಾಟಕ ಜನ ನಮ್ಮನ್ನ ಮೆಚ್ಚುವಂತ ಕೆಲಸ ಮಾಡ್ತೀವಿ ಎಂದು. ಗ್ಯಾರಂಟಿ ನ್ಯೂಸ್ ನ ಸಿಎಫ್ಒ ರಾಕೇಶ್, ಕಿರಿಕ್ ಕೀರ್ತಿ, ಕೆ.ಎಂ. ಶಿವಕುಮಾರ್, ಸುರೇಶ್, ಡಾ.ಕೃಷ್ಣ, ನಮ್ರತಾ ಸೇರಿ ಗ್ಯಾರಂಟಿ ನ್ಯೂಸ್ನ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.
BREAKING: ‘ಸಕ್ರೀಯ ರಾಜಕಾರಣ’ಕ್ಕೆ ‘ಮಾಜಿ ಸ್ಪೀಕರ್ ರಮೇಶ್ ಕುಮಾರ್’ ನಿವೃತ್ತಿ ಘೋಷಣೆ
ಐಪಿಎಲ್ 2024: ‘ಟಾಟಾ ಐಪಿಎಲ್ ಫ್ಯಾನ್ ಪಾರ್ಕ್’ 2ನೇ ಹಂತದ ವೇಳಾಪಟ್ಟಿ ಪ್ರಕಟ | TATA IPL Fan Park