ಕಲಬುರ್ಗಿ : ಕಾಂಗ್ರೆಸ್ ಪ್ರಣಾಳಿಕೆಯ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟೀಕೆಸಿರುವ ವಿಚಾರವಾಗಿ ಕಲಬುರ್ಗಿಯಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದು, ಇವರು ಚುನಾವಣೆಯಲ್ಲಿ ಮತ ಗಳಿಸಲು ಮುಸ್ಲಿಂ ಲೀಗ್ ಬೇಕಾ? ಉದಿಯವರಿಗೆ ಇತಿಹಾಸ ಫೋಟೋ ತೆರೆದ ನೋಡಲಿ ದೇಶದ ವಿಭಜನೆಗೆ ಮೊದಲು ಪ್ರಸ್ತಾವನೆ ಇಟ್ಟವರೆ ವಿಡಿ ಸಾವರ್ಕರ್ ಎಂದು ತಿರುಗೇಟು ನೀಡಿದರು.
ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ಒಮ್ಮೆ ಇತಿಹಾಸದ ಪುಟ ತೆಗೆದ ನೋಡಲಿ. ಮೊದಲು ದೇಶ ವಿಭಜನೆಗೆ ಪ್ರಸ್ತಾವನೆ ಇಟ್ಟವರೆ ವಿಡಿ ಸಾವರ್ಕರ್. ಮೋದಿ ಸರ್ಕಾರದಿಂದ ಕನ್ನಡಿಗರು ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು ಎಂದು ಕಲ್ಬುರ್ಗಿಯಲ್ಲಿ ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮೋದಿ ಟೀಕೆ ವಿಚಾರವಾಗಿ ಪ್ರಧಾನಿ ಮೋದಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ಮೋದಿಗೆ ಬಿಜೆಪಿ ಐಟಿ ಸೆಲ್ ಮಾಹಿತಿ ಕೊಡುತ್ತದೆ. ಅದರ ಬದಲು ಸ್ವಲ್ಪ ಪುಸ್ತಕ ಓದಿದರೆ ಗೊತ್ತಾಗುತ್ತದೆ. ಮುಸ್ಲಿಂ ಲೀಗ್ ಮೈತ್ರಿ ಸರ್ಕಾರ ಮಾಡಿದ್ದರು. ಬಿಜೆಪಿ ಆರ್ಎಸ್ಎಸ್ ಹಿಂದೂ ಮಹಾಸಭಾ ಮೈತ್ರಿ ಸರ್ಕಾರ ರಚಿಸಿದರು.ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು 10 ವರ್ಷ ಆಯಿತು ಇನ್ನೂ ಪ್ರಚಾರಕ್ಕೆ ನಿಮಗೆ ಮುಸ್ಲಿಂ ಲೀಗ್ ಬೇಕಾ? ಎಂದು ವಾಗ್ದಾಳಿ ನಡೆಸಿದರು.