ಬೆಂಗಳೂರು : ಬೆಂಗಳೂರ ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜನ್ನೂರಿನಲ್ಲಿ ಮನಸಿಕ ಖಿನ್ನತೆಗೆ ಒಳಗಾಗಿದ್ದ ರೌಡಿಶೀಟರ್ ಅರುಣ್ ಅಲಿಯಾಸ್ ಚಿನ್ನಿ (28) ಆತ್ಮಹತ್ಯೆ ಮಾಡಿಕೊಂಡಿರುವ ಈ ಘಟನೆ ನಡೆದಿದೆ.2019ರಲ್ಲಿ ಲೋಕನಾಥ ಕೊಲೆ ಕೇಸ್ನಲ್ಲಿ ಅರುಣ್ ಜೈಲು ಸೇರಿದ ಎಂದು ಹೇಳಲಾಗುತ್ತಿದೆ ಈ ವೇಳೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಎನ್ನಲಾಗಿದೆ.
ಇತ್ತೀಚಿಗೆ ರೌಡಿಶೀಟರ್ ಅರುಣ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗುತ್ತಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ರೌಡಿಶೀಟರ್ ಅರುಣ್ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಕುರಿತಂತೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.