ಕಲಬುರ್ಗಿ : ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಕನ್ನಡಿಗರ ಕ್ಷಮೆಯಾಚಿಸಬೇಕು. ಈಗ ಯಾಕೆ ಚುನಾವಣಾ ಆಯೋಗದ ಅನುಮತಿಗಾಗಿ ಕಳುಹಿಸಬೇಕಿತ್ತು? ಈಗಾಗಲೇ ರಾಜ್ಯ ಸರ್ಕಾರ ಏನು ಮಾಡಬೇಕು ಅದನ್ನೆಲ್ಲ ಮಾಡಿದ್ದೇವೆ. ಪ್ರತಿ ರೈತರಿಗೆ 2000 ಕೊಟ್ಟಿದ್ದೀವಿ. ಕುಡಿಯುವ ನೀರಿಗೆ 2000 ಕೋಟಿ ಅನುದಾನ ಮೀಸಲಿಟ್ಟಿದ್ದೇವೆ ಎಂದು ಕಲ್ಬುರ್ಗಿಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದರು.
ಬರ ಪರಿಹಾರ ಕುರಿತಂತೆ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿರುವ ಕುರಿತಂತೆ ಸಚಿವ ಪ್ರಿಯಾಂಕರ್ ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಮಿತ್ ಶಾ ರೀತಿ ವಿತ್ತ ಸಚಿವೆ ನಿರ್ಮಲ ಕೂಡ ಸುಳ್ಳು ಹೇಳುತ್ತಿದ್ದಾರೆ. ನಿರ್ಮಲ ಸೀತಾರಾಮನ್ ಕರ್ನಾಟಕದ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಬರ ಪರಿಹಾರ ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ ಎನ್ನುತ್ತಿದ್ದಾರೆ ಹಾಗಾದರೆ ಸಿಎಂ ಕಂದಾಯ ಸಚಿವರು ಅಮಿತ್ ಶಾ ಬೇಟಿಯಾಗಿದ್ದು ಯಾಕೆ? ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಬರ ಪರಿಹಾರ ನೀಡಿ ಅಂತ ಅವರನ್ನು ಭೇಟಿಯಾಗಿದ್ದಲ್ವಾ? ಅಮಿತ್ ಶಾ ಪತ್ರ ಜೈಶಾ ಬಳಿ ಐಪಿಎಲ್ ಟಿಕೆಟ್ ಕೇಳೋಕೆ ಭೇಟಿಯಾಗಿದ್ವ? ರಾಜ್ಯದ ಬರ ಪರಿಹಾರದಲ್ಲಿ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ. ಚುನಾವಣೆ ಘೋಷಣೆಗೂ ಮುಂಚೆ ನಮ್ಮ ಪ್ರಸ್ತಾವವಿದ್ದರೂ ಕೂಡ ಯಾಕೆ ಕೊಟ್ಟಿಲ್ಲ? ಕನ್ನಡಿಗರನ್ನು ವೋಟ್ ಬ್ಯಾಂಕ್ ನೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ ಕೇಂದ್ರಕ್ಕೆ ನಾವು ಬರ ಪರಿಹಾರ ಕೋರಿ ಮನವಿ ಸಲ್ಲಿಸಿ, ಏಳು ತಿಂಗಳಾಯ್ತು ಇದುವರೆಗೂ ಉನ್ನತ ಮಟ್ಟದ ಸಭೆ ನಡೆಸಿಲ್ಲ ಅಂತ ದೇಶಕ್ಕೆ ಉತ್ತರ ಕೊಡಲಿ ಕೇಂದ್ರದ ಬಿಜೆಪಿ ಸರ್ಕಾರದವರು ಸಚಿವ ಪ್ರಿಯಾಂಕ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.