ಶಿವಮೊಗ್ಗ : ಲೋಕಸಭೆ ಚುನಾವಣೆಗೆ ಮಾಜಿ ಜೀವ ಕೆಎಸ್ ಈಶ್ವರಪ್ಪ ಅವರ ಮಗ ಕಾಂತೇಶ್ ಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಇದೀಗ ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದು ಶಿವಮೊಗ್ಗದಲ್ಲಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮತ್ತೆ ಕೆಎಸ್ ಈಶ್ವರಪ್ಪ ಗರ್ಜಿಸಿದ್ದು, ಶನೇಶ್ವರ ಹಾಗೂ ಗಣೇಶನ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ ಈ ಬಾರಿ ಚುನಾವಣೆಯಲ್ಲಿ ನಿಂತೆ ನಿಲ್ಲುತ್ತೇನೆ ಎಂದು ಗುಡುಗಿದರು.
ರಾಜ್ಯಕ್ಕೆ ಆಗಿರುವ ಅನ್ಯಾಯ ಒಪ್ಪಿಕೊಂಡ ‘ನಿರ್ಮಲಾ ಸೀತಾರಾಮನ್’ಗೆ ಧನ್ಯವಾದ- ಡಿ.ಕೆ ಶಿವಕುಮಾರ್
ಶಿವಮೊಗ್ಗದಲ್ಲಿ ಸಮಾರಂಭ ಒಂದರಲ್ಲಿ ಮಾತನಾಡಿದ ಅವರು, ಏಪ್ರಿಲ್ 19 ರಿಂದ ರಾವಣನ ಸಂಹಾರಕ್ಕೆ ಸಜ್ಜಾಗಿ ಎಂದು ಬಿಎಸ್ ಯಡಿಯೂರಪ್ಪ ಹಾಗೂ ಪುತ್ರರ ವಿರುದ್ಧ ಈಶ್ವರಪ್ಪ ಘರ್ಜಿಸಿದ್ದಾರೆ. ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಪುತ್ರರ ದರ್ಬಾರ್ ಆಗಿದೆ.ಯಡಿಯೂರಪ್ಪ ಎಲ್ಲರಿಗೂ ಮೋಸ ಮಾಡಿದ್ದಾರೆ. ಚುನಾವಣೆಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಮೋಸ ಮಾಡಿದ್ದಾರೆ. ನಾವೇನು ಅವರಿಗೆ ಮೋಸ ಮಾಡಿದ್ವಿ? ಏಪ್ರಿಲ್ 12 ರಂದು ನಾಮಿನೇಷನ್ ಹಾಕಿ ಹಾಕುತ್ತೇನೆ. ಶನೇಶ್ವರ, ಗಣೇಶನ ಮೇಲಾಣೆಗೂ ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದು ಶಿವಮೊಗ್ಗದಲ್ಲಿ ಬಿಎಸ್ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
‘ಚುನಾವಣಾ ಬಾಂಡ್’ ಅಕ್ರಮದ ರೂವಾರಿ ‘ಮೋದಿ’, ಅವರನ್ನು ಬಂಧಿಸಿ: ‘ಮುಖ್ಯಮಂತ್ರಿ ಚಂದ್ರು’ ಆಗ್ರಹ
ಬಿಜೆಪಿ ಕಾರ್ಯಕರ್ತರು ರಾಮನ ದಿನದ ರೂಪದಲ್ಲಿ ಹನುಮಂತನ ನೇತೃತ್ವದಲ್ಲಿ ಹೊರಟಿದ್ದಾರೆ. ರಾವಣನ ಸಂಹಾರಕ್ಕೆ ದೊಡ್ಡ ಸಂಹಾರಕ್ಕೆ ಹೊರಟಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಬಿಎಸ್ ಯಡಿಯೂರಪ್ಪ ಮಗನ ಸೋಲಿಸುವುದಕ್ಕೆ ಈಶ್ವರಪ್ಪನ ಗೆಲ್ಲಿಸುವುದಕ್ಕೆ ಇಡೀ ಶಿವಮೊಗ್ಗ ಜಿಲ್ಲೆಯ ಎಲ್ಲಾ ಜನರು ತಯಾರಾಗಿದ್ದಾರೆ. ಸ್ಯಾಂಪಲ್ ಹನ್ನೆರಡನೇ ತಾರೀಕಿನ ನಾಮಪತ್ರ ಸಲ್ಲಿಕೆ ಎಂದು ತಿಳಿಸಿದರು.
BREAKING : ಬೆಂಗಳೂರಲ್ಲಿ ‘ಹಿಟ್ ಅಂಡ್ ರನ್’ ಗೆ ವೃದ್ದೆ ಬಲಿ : ಕಾರು ಚಾಲಕ ಪರಾರಿ
ಪಕ್ಕದಲ್ಲಿ ಗಣಪತಿ ದೇವಸ್ಥಾನ ಹಿಂಬಾಗದಲ್ಲಿ ಶನೇಶ್ವರ ದೇವಸ್ಥಾನವಿದೆ. ಎರಡು ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಚುನಾವಣೆಗೆ ನಿಂತೇ ನಿಲ್ಲುತ್ತೇನೆ. ಒಬ್ಬೊಬ್ಬರಿಗೆ ಒಂದೊಂದು ಕಾನೂನು ಇರಲ್ಲ. ಭಾರತೀಯ ಜನತಾ ಪಾರ್ಟಿಯಿಂದ ಒಂದೇ ಕಾನೂನು ತರಬೇಕು ಎಂದು ಕುಟುಂಬಕ್ಕೆ ಒಂದು ಸೀಟು ಎಂದಾಗ, ಯಡಿಯೂರಪ್ಪ ಕಾಂತೇಶ್ ಗೆ ಟಿಕೆಟ್ ಕೊಡಿಸುತ್ತೇನೆ ಹಾವೇರಿಯಲ್ಲಿ ಓಡಾಡಿ ಪ್ರಚಾರ ಮಾಡುತ್ತೇನೆ ಎಂದು ಹೇಳಿಲ್ಲವೆಂದು ದೇವರ ಮೇಲೆ ಆಣೆ ಮಾಡಿ ಪ್ರಮಾಣ ಮಾಡಲಿ. ನಾನು ಹೀಗೆ ಹೇಳಿಲ್ಲ ಎಂದು ಪ್ರಮಾಣ ಮಾಡಿ ಹೇಳಲಿ ನೋಡಣ? ಮೋಸಗಾರರಿಗೆ ಯಾವತ್ತಿಗೂ ಒಳ್ಳೆದಾಗಲ್ಲ ಎನ್ನುವುದು ನೀವೆಲ್ಲ ಈ ಚುನಾವಣೆ ತೋರಿಸಬೇಕಾಗಿದೆ ಎಂದು ತಿಳಿಸಿದರು.