ಮುಜಾಫರ್ ಘರ್(ಪಾಕಿಸ್ತಾನ) : ಪವಿತ್ರ ರಂಜಾನ್ ಮಾಸದಲ್ಲಿ ಮಸೀದಿಯೊಳಗೆ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಬಾಲಕ ಮಸೀದಿಯೊಳಗೆ ಕುರಾನ್ ಕಲಿಯುತ್ತಿದ್ದ ಎಂದು ವರದಿಗಳಿವೆ. ಮುಜಾಫರ್ ಗಢದ ಕೋಟ್ ಅಡ್ಡಸ್ ಪಟ್ಟಣದ ಸನವಾನ್ ಭುಖಿ ಚೌಕ್ ನಲ್ಲಿರುವ ಮಸೀದಿಯೊಳಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಘೋರ ಕೃತ್ಯ ನಡೆದಾಗ ಆರೋಪಿಯು ಪವಿತ್ರ ರಂಜಾನ್ ತಿಂಗಳಲ್ಲಿ ಅದೇ ಮಸೀದಿಯಲ್ಲಿ ‘ಇತಿಕಾಫ್’ ಮಾಡುತ್ತಿದ್ದನು ಎಂಬ ವರದಿಗಳಿವೆ.
28 ವರ್ಷದ ಯುವಕನೊಬ್ಬ ಮಸೀದಿಯೊಳಗೆ 13 ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗುತ್ತಿದ್ದಾಗ ಮಸೀದಿಯ ಧರ್ಮಗುರು ಆತನನ್ನು ಹಿಡಿದಿದ್ದಾನೆ ಎಂದು ವರದಿಗಳು ತಿಳಿಸಿವೆ. ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎಂದು ಮಸೀದಿಯ ಧರ್ಮಗುರು ತಿಳಿಸಿದ್ದಾರೆ.