ಬೆಂಗಳೂರು : ಬೆಂಗಳೂರಿನಲ್ಲಿ ಬಿಜೆಪಿ ನಾಯಕನಿಗೆ ಹನಿ ಟ್ರ್ಯಾಪ್ ಮೂಲಕ ಹೆದರಿಸಿ ಸುಮಾರು ಎರಡು ಕೋಟಿ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಹೆಬ್ಬಾಳ ಠಾಣೆಯಲ್ಲಿ ಇದೀಗ ಬಿಜೆಪಿ ನಾಯಕ ದೂರು ನೀಡಿದ್ದಾರೆ.
ಮಂಡ್ಯವನ್ನು ಮಾದರಿ ಕ್ಷೇತ್ರವನ್ನಾಗಿಸುವುದೇ ನನ್ನ ಗುರಿ- ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಬಿಜೆಪಿ ನಾಯಕ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.ಜ್ಯೋತಿ, ಧರ್ಮೇಂದ್ರ ಹಾಗೂ ಬಾಲು ಎಂಬುವವರ ವಿರುದ್ಧ ಇದೀಗ ಬಿಜೆಪಿ ನಾಯಕ ದೂರು ನೀಡಿದ್ದಾರೆ.ಹೊಳೆನರಸೀಪುರದಲ್ಲಿ ವಾಸವಾಗಿರುವ ಜ್ಯೋತಿ, ಇವರ ಪತಿ ಧರ್ಮೇಂದ್ರ ಹಾಗು ಸ್ನೇಹಿತ ಬಾಲು ಸೇರಿಕೊಂಡು ವಿಡಿಯೋ ಕಾಲ್ ಮಾಡಿ ಅಶ್ಲೀಲ ವಿಡಿಯೋ ತೋರಿಸಿ ರೆಕಾರ್ಡ್ ಮಾಡಿಕೊಂಡಿದ್ದರು.
5 ಗ್ಯಾರೆಂಟಿಗಳ ಜೊತೆ ಅಭ್ಯರ್ಥಿಗಳನ್ನು ಸೋಲಿಸುವ ಗ್ಯಾರೆಂಟಿಯೂ ಸಿದ್ದರಾಮಯ್ಯ ಸರ್ಕಾರದ್ದಾಗಿದೆ- ಬೊಮ್ಮಾಯಿ
ಕರೆ ಸ್ಥಗಿತಗೊಂಡ ಬಳಿಕ ರೆಕಾರ್ಡ್ ಮಾಡಿದ ವಿಡಿಯೋ ವೈರಲ್ ಮಾಡದೇ ಇರಲು 2 ಕೋಟಿ ರೂ. ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದರು ಎಂದು ಬಿಜೆಪಿ ನಾಯಕ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.