ಬೆಂಗಳೂರು: ನಾವು ಬ್ರಾಂಡ್ ಬೆಂಗಳೂರು ಮಾಡಲು ಹೊರಟಿದ್ದರೇ, ಬಿಜೆಪಿಯವರು ಬಾಂಬ್ ಬೆಂಗಳೂರು ಮಾಡಲು ಹೊರಡಿದೆಯೇ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿಕಾರಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, “ಭ್ರಷ್ಟ ಜನತಾ ಪಾರ್ಟಿ“ ಎಂದು ಹೆಸರಾಗಿದ್ದ ಬಿಜೆಪಿ ಈಗ “ಬಾಂಬ್ ಜನತಾ ಪಾರ್ಟಿ” ಎಂಬ ಹೆಸರು ಪಡೆಯಲು ಮುಂದಾಗಿದೆಯೇ!? ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿದ್ದ NIA ಈಗ ಆರೋಪಿಗಳನ್ನು ಹುಡುಕುತ್ತಾ ಬಿಜೆಪಿ ಬಾಗಿಲಲ್ಲಿ ಬಂದು ನಿಂತಿದೆ ಎಂದು ವಾಗ್ಧಾಳಿ ನಡೆಸಿದೆ.
ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ, ತೀರ್ಥಹಳ್ಳಿ ತಾಲ್ಲೂಕಿನ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಿದೆ. ನಾವು ಬ್ರಾಂಡ್ ಬೆಂಗಳೂರು ಮಾಡಲು ಹೊರಟಿದ್ದರೆ ಬಿಜೆಪಿ “ಬಾಂಬ್ ಬೆಂಗಳೂರು” ಮಾಡಲು ಹೊರಟಿದೆಯೇ? ಎಂದು ಪ್ರಶ್ನಿಸಿದೆ.
ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ತಮ್ಮ ಕಾರ್ಯಕರ್ತರ ಮೂಲಕ ಷಡ್ಯಂತ್ರ ರೂಪಿಸಿದೆಯೇ? NIA ತನಿಖಾ ಸಂಸ್ಥೆ ಜಗನ್ನಾಥ ಭವನವನ್ನೂ ಒಮ್ಮೆ ಶೋಧಿಸಿದರೆ ಸೂಕ್ತವಲ್ಲವೇ ಬಿಜೆಪಿ ಎಂದು ಗುಡುಗಿದೆ.
“ಭ್ರಷ್ಟ ಜನತಾ ಪಾರ್ಟಿ“ ಎಂದು ಹೆಸರಾಗಿದ್ದ ಬಿಜೆಪಿ ಈಗ “ಬಾಂಬ್ ಜನತಾ ಪಾರ್ಟಿ” ಎಂಬ ಹೆಸರು ಪಡೆಯಲು ಮುಂದಾಗಿದೆಯೇ!?
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿದ್ದ NIA ಈಗ ಆರೋಪಿಗಳನ್ನು ಹುಡುಕುತ್ತಾ ಬಿಜೆಪಿ ಬಾಗಿಲಲ್ಲಿ ಬಂದು ನಿಂತಿದೆ,
ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ, ತೀರ್ಥಹಳ್ಳಿ ತಾಲ್ಲೂಕಿನ ಯುವ ಮೋರ್ಚಾ ಪ್ರಧಾನ… pic.twitter.com/npvccYVz73
— Karnataka Congress (@INCKarnataka) April 5, 2024
ಬೆಂಗಳೂರಲ್ಲಿ ‘ಕಾಲರಾ’ ರೋಗ ಪತ್ತೆ : ಹೋಟೆಲ್, ರೆಸ್ಟೋರೆಂಟ್, ಕೆಫೆ ಮಾಲೀಕರಿಗೆ ‘BBMP’ ಮಹತ್ವದ ಆದೇಶ