ಶಿವಮೊಗ್ಗ : ಜಿಲ್ಲಾ ಸ್ವೀಪ್ ಸಮಿತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಮತದಾನ ಜಾಗೃತಿ ಮೂಡಿಸಲು ಆಯ್ಕೆಗೊಂಡಿರುವ ಚುನಾವಣಾ ಐಕಾನ್‍ಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಹಾಗೂ ಎಸ್‍ಪಿ ಮಿಥುನ್ ಕುಮಾರ್‍ರವರು ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಅಭಿನಂದನಾ ಪತ್ರ ವಿತರಣೆ ಮಾಡಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಅವರಲ್ಲಿ ಮನವಿ ಮಾಡಿದರು.
ಚುನಾವಣಾ ಐಕಾನ್ ವಿವರ
ದೀಕ್ಷಿತ್ – ಪಿ ಡಬ್ಲ್ಯೂ ಡಿ(ಅಂಧ) ಮತದಾರ – 2021 ರ ಶೈಕ್ಷಣಿಕ ವರ್ಷದಲ್ಲಿ ಕುವೆಂಪು ವಿಶ್ವ ವಿದ್ಯಾಲಯ ದ ಇಂಗ್ಲಿμï ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದಿರುವುದಕ್ಕೆ ಸ್ವರ್ಣ ಪದಕ ಪಡೆದಿರುತ್ತಾರೆ. ಪ್ರಸ್ತುತ ಪಿ ಹೆಚ್‍ಡಿ ವ್ಯಾಸಂಗ ಮಾಡುತ್ತಿರುತ್ತಾರೆ.
ಜ್ಯೋತಿ – ಅಂತರ್ ರಾಷ್ಟ್ರೀಯ ಕ್ರೀಡಾಪಟು ( ತ್ರೋ ಬಾಲ್ ) ಒಲಂಪಿಯಾಡ್. 2022ರಲ್ಲಿ ರಾಜ್ಯ ಪ್ರಶಸ್ತಿ, 2024 ರಲ್ಲಿ ಕ್ರೀಡಾ ರತ್ನ ಪ್ರಶಸ್ತಿ, 2024 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರಕಿದೆ.
ಡಾ. ಶುಬ್ರತಾ ಕೆ.ಎಸ್ ಮನೋವೈದ್ಯರು ಮತ್ತು ಲೇಖಕರು. ಇಂಗ್ಲೆಂಡ್ ನ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ ನೀಡುವ ಓವರ್‍ಸೀಸ್ ಪ್ರಶಸ್ತಿ ಪಡೆದಿರುತ್ತಾರೆ.
ನಿವೇದನ್ ನೆಂಪೆ – ಯುವ ಉದ್ಯಮಿ. ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್ ಅವಾರ್ಡ್ 2015, ಇನ್ನೋವೇಟಿವ್ ಪ್ರಾಡಕ್ಟ್ ಆಫ್ ದ ಇಯರ್ 2015. ಚೇಂಬರ್ ಆಫ್ ಕಾಮರ್ಸ್ ಬಿಜಿನೆಸ್ ಅವಾರ್ಡ್ 2015 ಪಡೆದಿರುತ್ತಾರೆ.
ನಾಗರಾಜ್ ತೋಂಬ್ರಿ ಜೋಗಿ ಜಾನಪದ ಕಲಾವಿದರು. ಹೃದಯವಾಹಿ ದಶಮಾನೋತ್ಸವ ಪ್ರಶಸ್ತಿ- ಕೊಚ್ಚಿನ್. ಕರಾವಳಿ ರಾಜ್ಯಮಟ್ಟದ ಪ್ರಶಸ್ತಿ ಕಾಸರಗೋಡು –ಕೇರಳ. ಕಾಯಕಶ್ರೀ ಪ್ರಶಸ್ತಿ ವೀರಶೈವ ಸಂಸ್ಥೆ ಬೆಂಗಳೂರು ಪಡೆದಿರುತ್ತಾರೆ.
ಬೆಂಗಳೂರಲ್ಲಿ ‘ಕಾಲರಾ’ ರೋಗ ಪತ್ತೆ : ಹೋಟೆಲ್, ರೆಸ್ಟೋರೆಂಟ್, ಕೆಫೆ ಮಾಲೀಕರಿಗೆ ‘BBMP’ ಮಹತ್ವದ ಆದೇಶ