ಚಾಮರಾಜನಗರ : ಬಟ್ಟೆ ತೊಳೆಯಲು ಜಲಾಶಯಕ್ಕೆ ತೆರಳಿದ ವೇಳೆ ತಾಯಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಈ ವೇಳೆ ತಾಯಿಯನ್ನು ರಕ್ಷಿಸಲು ಹೋದ ಇಬ್ಬರು ಮಕ್ಕಳು ಸಹ ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗುಂಡಲ್ ಜಲಾಶಯದಲ್ಲಿ ಈ ದುರಂತ ಸಂಭವಿಸಿದೆ.
ಹೌದು ಇಂದು ಗುಂಡಲ್ ಜಲಾಶಯದಲ್ಲಿ ಮುಳುಗಿ ತಾಯಿ ಮಗು ಸಾವನ್ನಾಪ್ಪಿದ್ದರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗುಂಡಲ ಜಲಾಶಯದಲ್ಲಿ ಈ ಅವಘಡ ಸಂಬಂಧಿಸಿದೆ. ಮೀನಾ (33) ಪವಿತ್ರ (13) ಕೀರ್ತಿ (12)ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಒಂದು ದುರಂತದಲ್ಲಿ ಜಲಾಶಯದಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ಕಾಲುಜಾರಿ ಬಿದ್ದ ತಾಯಿಯನ್ನು ರಕ್ಷಿಸಲು ಹೋಗಿ ಇಬ್ಬರು ಮಕ್ಕಳು ಸಹ ನೀರು ಪಾಲಾಗಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.