ದಾವಣಗೆರೆ : ಲೋಕಸಭೆ ಚುನಾವಣೆಯಲ್ಲಿ ಕೇವಲ ಬಿಜೆಪಿಯಲ್ಲೇ ಅಷ್ಟೆ ಅಲ್ಲದೆ ಇದೀಗ ಕಾಂಗ್ರೆಸ್ನಲ್ಲೂ ಬಂಡಾಯ ಎದ್ದಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಇದೀಗ ದಾವಣಗೆರೆ ಕ್ಷೇತ್ರದಿಂದ ಯುವ ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಜಿ ಬಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ಕೈ ಬಂಡಾಯ ನಾಯಕ ವಿನಯ್ ಕುಮಾರ್ ಹೇಳಿಕೆ ನೀಡಿದರು. ಕಾಂಗ್ರೆಸ್ ಟಿಕೆಟ್ ಕೈತಪ್ಪಿರಬಹುದು ಆದರೆ ನಾನು ಪಕ್ಕಾ ಕಾಂಗ್ರೆಸ್ಸಿಗ. ಕಾಂಗ್ರೆಸ್ ಸೋಲಿಸುವುದು ಅಥವಾ ಬಿಜೆಪಿ ಗೆಲ್ಲಿಸುವುದು ನನ್ನ ಗುರಿ ಅಲ್ಲ ಎಂದರು.
ನಾನು ಗೆಲ್ಲುವ ಕಡೆ ಪ್ರಯತ್ನ ಮಾಡುತ್ತೇನೆ.ಎಂದು ವಿನಯ್ ಕುಮಾರ್ ಹೇಳಿದರು.ನಾಮಪತ್ರ ಸಲ್ಲಿಸುತ್ತೇನೆ ಆದರೆ ಅದನ್ನು ಹಿಂದು ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು.