ಬೆಂಗಳೂರು : ನನಗೆ ನನ್ನ ಭವಿಷ್ಯಕ್ಕಿಂತ ನನ್ನ ಮಂಡ್ಯ ಜಿಲ್ಲೆ ನಮ್ಮ ರಾಜ್ಯ ನಮ್ಮ ದೇಶದ ಭವಿಷ್ಯ ಮುಖ್ಯವಾಗಿದೆ.ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಗಳನ್ನು ಮೆಚ್ಚಿಕೊಂಡು ಇಂದು ನಾನು ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದೇನೆ.ಇವತ್ತು ನನಗೆ ನನ್ನ ರಾಜಕೀಯ ಜೀವನದಲ್ಲಿ ಅತ್ಯಂತ ಸುದಿನವಾದಂತ ದಿನ ಎಂದು ಬಿಜೆಪಿ ಪಕ್ಷ ಸೇರ್ಪಡೆಯಾದ ಬಳಿಕ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದರು.
BREAKING : ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಸಂಸದೆ ಸುಮಲತಾ ಅಂಬರೀಶ್!
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು, ಇಂದು ರಾಜಕೀಯ ನನ್ನ ಜೀವನದಲ್ಲಿ ಮಹತ್ವ ಪಡೆದುಕೊಂಡಿರುವಂತಹ ಸುದಿನ ಎಂದು ಭಾವಿಸುತ್ತೇನೆ. ಐದು ವರ್ಷಗಳ ಹಿಂದೆ ಒಂದು ಐತಿಹಾಸಿಕ ಗೆಲುವು ನನ್ನ ಕ್ಷೇತ್ರವಾದ ಮಂಡ್ಯದಲ್ಲಿ ನನಗೆ ಸಿಕ್ಕಿತ್ತು ಆ ಚುನಾವಣೆ ಅದು ನಿಜಕ್ಕೂ ಎಂದು ಮರೆಯುವಂತಹದ್ದಲ್ಲ ಎಂದರು.
ಎಲ್ಲಿ ಹೋಯ್ತು ನಿಮ್ಮ ‘ಗ್ಯಾರಂಟಿ’ ಯೋಜನೆಗಳ ವಿಶ್ವಾಸ? : ಸಿಎಂ ಸಿದ್ದರಾಮಯ್ಯಗೆ ಬಿವೈ ವಿಜಯೇಂದ್ರ ಪ್ರಶ್ನೆ
ನನ್ನ ಬೆಂಬಲಿಗರು ಮಂಡ್ಯ ಅಂಬರೀಶ್ ಅಭಿಮಾನಿಗಳ ಬಳಗ ಅವತ್ತಿನ ದಿನ ನನಗೆ ಸಾಕಷ್ಟು ಬೆಂಬಲ ಸಹಕಾರ ನೀಡಿತ್ತು. ಜೊತೆಗೆ ಭಾರತೀಯ ಜನತಾ ಪಕ್ಷ ಕೂಡ ಬಾಹ್ಯ ಬೆಂಬಲವಾಗಿ ಬೆಂಬಲ ಕೊಟ್ಟು ಸಾಕಷ್ಟು ಶಕ್ತಿಯನ್ನು ಅನ್ನು ನೀಡಿತ್ತು. ನರೇಂದ್ರ ಮೋದಿ ಅವರು 5 ವರ್ಷದ ಹಿಂದೆ ಮೈಸೂರಿಗೆ ಬಂದ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದರು ಕೂಡ ಮತದಾರರಲ್ಲಿ ನನ್ನ ಪರವಾಗಿ ಪ್ರಚಾರ ಮಾಡಿ ಮತದಾನ ನೀಡಿ ಎಂದು ಮತದಾರರ ಮನವಿ ಮಾಡಿರುವುದು ಎಂದೆಂದಿಗೂ ಮರೆಯುವುದಿಲ್ಲ ಎಂದರು.
ಬೆಂಗಳೂರಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ‘ಡ್ರಗ್ಸ್ ಮಾರಾಟ’: ಇಬ್ಬರು ಆರೋಪಿಗಳು ಸೇರಿದಂತೆ ಹಲವು ವಸ್ತುಗಳು ವಶಕ್ಕೆ
ನಾನು ಪಾರ್ಲಿಮೆಂಟ್ ಗೆ ಬಂದ ನಂತರ ನನಗೆ ಸಾಕಷ್ಟು ಭಾರತೀಯ ಜನತಾ ಪಕ್ಷದ ನಾಯಕರಿಂದ ಸಾಕಷ್ಟು ಮಾರ್ಗದರ್ಶನ ಸಿಕ್ಕಿದೆ. ಅವರೆಲ್ಲರಿಗೂ ನಾನು ಇಂದು ಧನ್ಯವಾದ ಹೇಳುತ್ತಿದ್ದೇನೆ ಅದೇ ನನಗೆ ಸ್ಪೂರ್ತಿ ಹಾಗೂ ಮಾರ್ಗದರ್ಶನವಾಗಿದೆ. ಮುಖ್ಯವಾಗಿ ಹೇಳಬೇಕು ಎಂದರೆ ನನ್ನ ಸ್ಪೂರ್ತಿ ಅಂದರೆ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರ ನಾಯಕತ್ವ ಅವರ ಪರಿಕಲ್ಪನೆ ಅವರ ಕನಸುಗಳು ಎಲ್ಲವು ಕೂಡ ನನಗೆ ಸ್ಫೂರ್ತಿ ಎಂದು ಅವರು ಹೇಳಿದರು.