ಮಂಡ್ಯ : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರದು ರೈತರಿಗಾಗಿ ನಡೆಯುವಂತಹ ಹೃದಯ ಯಾವಾಗಲೂ ಅವರು ರೈತರ ಕಣ್ಮಣಿಯಾಗಿದ್ದು, 30 ವರ್ಷಗಳ ತಮ್ಮ ರಾಜಕೀಯ ಜೀವನದುದ್ದಕ್ಕೂ ಅವರು ರೈತರ ಸೇವೆ ಮಾಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಅವರು, ತನ್ನ ರಾಜಕೀಯ ಜೀವನದುದ್ದಕ್ಕೂ ಜನರಿಗಾಗಿ ಹೆಚ್ಡಿಕೆಯವರ ಹೃದಯ ಮಿಡಿದಿದೆ. ಈ ಕಾರಣದಿಂದಲೇ ಜನರು ಹೃದಯವಂತ ಅಂತ ಕರೆಯುತ್ತಾರೆ ಎಂದರು.
ದೇಶವನ್ನ ಕಟ್ಟಿಲಿಕ್ಕೆ ಮೋದಿಯವರು 10 ವರ್ಷ ಕೆಲಸ ಮಾಡುತ್ತಿದ್ದಾರೆ. ವಿಶ್ರಾಂತಿಯನ್ನೇ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಅವರನ್ನ ಮತ್ತೊಮ್ಮೆ ಪ್ರಧಾನಿ ಮಾಡಲು ದೇವೆಗೌಡರು ಕೈಜೋಡಿಸಿದ್ದಾರೆ ಎಂದು ನಿಖಿಲ್ ತಿಳಿಸಿದರು.
ಎನ್.ಡಿ.ಎ ಮೈತ್ರಿಗೆ ಮುಖ್ಯ ಕಾರಣ ಪ್ರಮೋದ್ ಸಾವಂತ್. ಮಂಡ್ಯದ ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡುವುದಿಲ್ಲ. ಕಾವೇರಿ ಸಮಸ್ಯೆಯನ್ನ ಕುಮಾರಸ್ವಾಮಿ ಬಗೆಹರಿಸುತ್ತಾರೆ ಅಂತ ತಾವು ಅಂದುಕೊಂಡಿದ್ದೀರಿ. ಅದಕ್ಕಾಗಿ ಕುಮಾರಸ್ವಾಮಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.