ಬೆಂಗಳೂರು : ಡೆವಿಲ್ ಸಿನಿಮಾ ಚಿತ್ರೀಕರಣ ವೇಳೆ ನಟ ದರ್ಶನ್ ಗೆ ಕೈಗೆ ಬೆಟ್ಟ ಆಗಿದ್ದು ಈ ಹಿನ್ನೆಲೆಯಲ್ಲಿ ಇಂದು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಬಳ್ಳ ಮೂಲಗಳಿಂದ ತಿಳಿದುಬಂದಿದೆ.
ಹೌದು ಡೆವಿಲ್ ಸಿನಿಮಾದ ಸಾಹಸ ಸನ್ನಿವೇಶ ಶೂಟಿಂಗ್ ಸಮಯದಲ್ಲಿ ಅವರ ಕೈಗೆ ಏಟು ಬಿದ್ದಿದೆ ಎಂದು ಹೇಳಲಾಗುತ್ತಿದ್ದು, ಕೈಗೆ ಬೆಲ್ಟ್ ಕಟ್ಟಿಕೊಂಡು ಈವರೆಗೂ ಓಡಾಡುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಈಗ ಆಪರೇಷನ್ ಗೆ ಒಳಗಾಗಲು ಅವರು ಮುಂದಾಗಿದ್ದಾರೆ.ಮಂಡ್ಯದಲ್ಲಿ ನಡೆದ ಸುಮಲತಾ ಅಂಬರೀಶ್ ಅವರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು ಆಸ್ಪತ್ರೆಗೆ ದಾಖಲಾಗಿ ಆಗಿ ಆಪರೇಷನ್ ಗೆ ಒಳಗಾಗಲಿದ್ದೇನೆ ಎಂದಿದ್ದಾರೆ.
ಇತ್ತೀಚಿಗೆ ಮಂಡ್ಯದಲ್ಲಿ ಬೆಂಬಲಿಗರ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಸುಮಲತಾ ಅಂಬರೀಶ್ ಅವರು ಒಂದು ಸಭೆಯನ್ನು ನಡೆಸಿದರು. ಮಂಡ್ಯದಲ್ಲಿ ಸುಮಲತಾ ಸಾರ್ವಜನಿಕ ಸಭೆಯಲ್ಲಿ ಭಾಗಿ ಆಗಬೇಕಿತ್ತು ಈ ಕಾರಣದಿಂದಾಗಿ ಅವರು ತಮ್ಮ ಸರ್ಜರಿಯನ್ನು ಮುಂದೂಡಿದ್ದರು.
ದರ್ಶನ್ ಅವರು ವೇದಿಕೆ ಏರಿ ಮಾತನಾಡಿ ನಾನು ಈಗಾಗಲೆ ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು ಆದರೆ ಅಮ್ಮನಿಗೆ ಡೇಟ್ಸ್ ಕೊಟ್ಟಿದ್ದೆ ಅದನ್ನು ಮುಗಿಸಿ ಬರ್ತೀನಿ. ರಾತ್ರಿ ವೇಳೆಗೆ ಆಸ್ಪತ್ರೆ ಅಡ್ಮಿಟ್ ಆಗ್ತೇನೆ ನಾಳೆ ಆಪರೇಷನ್ ಮಾಡಿಸಿಕೊಳ್ಳುತ್ತೇನೆ ಎಂದು ದರ್ಶನ್ ಹೇಳಿದ್ದರು.