ಬೆಂಗಳೂರು : ಕಳ್ಳತನ ಹಾಗೂ ದರೋಡೆಯಿಂದ ಮನೆಯನ್ನು ಕಾಯಬೇಕಿದ್ದ ಸೆಕ್ಯೂರಿಟಿ ಗಾರ್ಡ್ ಇದೀಗ ಮಾಲೀಕನ ಮನೆಯಲ್ಲಿ ಲಕ್ಷಾಂತರ ರೂ. ಹಣ, ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರದ ರಾಮರೆಡ್ಡಿ ಕಾಂಪ್ಲೆಕ್ಸ್ ಬಳಿ ನಡೆದಿದೆ.
ರಾಜಶೇಖರ್ ಹಿಟ್ನಾಳ್ ಗೆದ್ದರೆ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ :ಮಾಜಿ ಸಚಿವ ಇಕ್ಬಾಲ್ ಅನ್ಸಾರಿ
ಈ ಘಟನೆಯು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರದ ರಾಮರೆಡ್ಡಿ ಕಾಂಪ್ಲೆಕ್ಸ್ ಹುಬ್ಬಳ್ಳಿ ನಡೆದಿದ್ದು ಮನೆಯ ಮಾಲೀಕ ಮಧುಸೂದನ್ ರೆಡ್ಡಿ ಅವರು ಒಬ್ಬಂಟಿಯಾಗಿದ್ದರು. ಇದನ್ನು ತಿಳಿದ ಸೆಕ್ಯೂರಿಟಿ ಗಾರ್ಡ್ ರೋಷನ್ ಆತನ ನಾಲ್ವರು ಸ್ನೇಹಿತರೊಂದಿಗೆ ಬಂದು ಮಧುಸೂದನ್ ರೆಡ್ಡಿ ಅವರ ಕೈಕಾಲು ಕಟ್ಟಿ ಹಾಕಿ ಸುಮಾರು 30 ಲಕ್ಷ ಹಣ ಹಾಗೂ 250 ಗ್ರಾಂ ಚಿನ್ನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ರೋಶನ್ ಕಳೆದ ಮೂರು ತಿಂಗಳಿಂದ ಪತ್ನಿ ಜೊತೆ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ. ಕಳೆದ ಎರಡು ದಿನಗಳ ಹಿಂದೆ ಸಂಪ್ ಕ್ಲೀನ್ ಮಾಡಲು ಓರ್ವ ಆರೋಪಿ ಬಂದಿದ್ದ. ತಡರಾತ್ರಿ ಸೆಕ್ಯೂರಿಟಿ ಗಾರ್ಡ್ ವಾಸವಿದ್ದ ಕೊಠಡಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದು, ಬಳಿಕ ಮನೆ ದೋಚಿ ರೋಶನ್ ಆ್ಯಂಡ್ ಗ್ಯಾಂಗ್ ಪರಾರಿಯಾಗಿದ್ದಾರೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.