ತುಮಕೂರು : ಬೈಕ್ ಮತ್ತು ಟಿಪ್ಪರ್ ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಮೂರು ತಿಂಗಳ ಹೆಣ್ಣು ಮಗು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಎಂಎಚ್ ಪಟ್ಟಣ ಕೆರೆಯ ಸಮೀಪದ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ನಡೆದಿದೆ.
ಚುನಾವಣೆಗೆ ಸ್ಪರ್ಧಿಸಲ್ಲ, ಮಂಡ್ಯ ಬಿಡಲ್ಲ: ಶನಿವಾರ ‘ಬಿಜೆಪಿ ಪಕ್ಷ’ ಸೇರ್ಪಡೆ- ಸುಮಲತಾ ಅಂಬರೀಶ್
ಗುಬ್ಬಿ ಪಟ್ಟಣದ ಲೋಕೇಶ್ ಹಾಗೂ ಲಕ್ಷ್ಮಿ ದಂಪತಿ ತಮ್ಮ ದ್ವಿಚಕ್ರ ವಾಹನದಲ್ಲಿ ಗುಬ್ಬಿ ಕಡೆಯಿಂದ ತುಮಕೂರಿಗೆ ಹೋಗುತ್ತಿದ್ದರು. ಇದೇ ವೇಳೆ ಮಣ್ಣು ತುಂಬಿಕೊಂಡಿದ್ದ ಟಿಪ್ಪರ್ ಒಂದು ಎಂಎಚ್ ಪಟ್ಟಣದ ಕಡೆ ತೆರಳುತ್ತಿದ್ದ ವೇಳೆ ತಕ್ಷಣ ಎಡಕ್ಕೆ ತಿರುವಿದಾಗ ಬೈಕ್ ಡಿಕ್ಕಿ ಆಗಿದೆ.
ಬರ ಪರಿಹಾರ ಸಂಬಂಧ ಅಮಿತ್ ಶಾ ಹೇಳಿಕೆ ಸತ್ಯ ಎಂದು ಸಾಬೀತುಪಡಿಸಿದರೆ ರಾಜಿನಾಮೆ ನೀಡುತ್ತೇನೆ : ಸಿಎಂ ಸಿದ್ದರಾಮಯ್ಯ
ಈ ವೇಳೆ ಮಗು ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದ್ದು, ಅಪಘಾತದಲ್ಲಿ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.